ಸರ್ವಜ್ಞನ ವಚನಗಳು: ಸಾಮಾಜಿಕ ವಿಡಂಬನೆ
- poorna drishti
- Jun 28, 2024
- 4 min read
ಗಗನ ಜೆ., ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ
ಜ್ಞಾನಸಹ್ಯಾದ್ರಿ, ಶಂಕರಘಟ್ಟ
ಹನ್ನೆರಡನೆ ಶತಮಾನದ ತರುವಾಯ ವಚನಗಳ ಮೂಲಕವೇ ಸಮಾಜವನ್ನು ತಲುಪಿದ, ಸಮಾಜವನ್ನು ತಿದಿದ್ದವನೆಂದರೆ ಅದು ಸರ್ವಜ್ಞ. ಈತನೇ ಹೇಳಿಕೊಂಡಿರುವAತೆ ‘ಸರ್ವಜ್ಞನೆಂಬುವನು ಗರ್ವದಿಂದಾವನೆ| ಸರ್ವರೊಳಗೊಂದೊAದು ನುಡಿಗಲಿತು| ವಿದ್ಯದ ಪರ್ವತವೇ ಆದ ಸರ್ವಜ್ಞ’ ಎಂದಿದ್ದಾನೆ. ಶಿಷ್ಟ ಸಾಹಿತ್ಯಕ್ಕೆ ಜಾನಪದವೇ ತಾಯಿ ಬೇರು ಆಗಿರುವಂತೆ, ಸರ್ವಜ್ಞನ ಜ್ಞಾನದ ಮೂಲವು ಜನಸಾಮಾನ್ಯರೊಂದಿಗಿನ ಅನುಭವವೇ ಆಗಿದೆ. ಆದ್ದರಿಂದಲೇ ಸರ್ವಜ್ಞನು ತಾನು ಜನಸಾಮಾನ್ಯರೊಂದಿಗೆ ಬೇರೆತು ಕಂಡುAಡ ಅನುಭವದ ಮೂಲಕವೇ ಸಮಾಜದ ಒಳಗಿರುವ ಅನೇಕ ರೀತಿಯ ಮೌಢ್ಯತೆ, ಢಾಂಬಿಕತೆ, ಜಾತಿಯತೆ, ಲೋಭತನ, ಸೋಮಾರಿತನ, ದುರಾಸೆ, ವ್ಯಾಮೋಹ, ಮೈಗಳ್ಳತನ ಇತ್ಯಾದಿಗಳ ಕುರಿತು ತನ್ನ ವಚನಗಳ ಮೂಲಕವೇ ವಿಡಂಬಿಸಿದ್ದಾನೆ. ಅಂತಹ ವಚನಗಳಲ್ಲಿ ಕೆಲವನ್ನು ಅಧ್ಯಯನದ ದೃಷ್ಟಿಯಿಂದ ಇಲ್ಲಿ ಆಯ್ದುಕೊಂಡು ವಿಶ್ಲೇಷಣೆಗೆ ಮತ್ತು ವಿಮರ್ಶೆಗೆ ಒಳಪಡಿಸಲಾಗಿದೆ.
ಸಮಾಜದಲ್ಲಿನ ಅನೇಕ ಕಟ್ಟುಪಾಡುಗಳು ಮನುಷ್ಯ ಮನುಷ್ಯರ ನಡುವೆ ಕಂದಕವನ್ನು ಏರ್ಪಡಿಸುತ್ತಿರುವ ಪ್ರಸ್ತುತದ ಸಂದರ್ಭದಲ್ಲಿ ಸರ್ವಜ್ಞನ ವಚನಗಳು ಅತ್ಯಂತ ಪ್ರಸ್ತುತವೆನಿಸುತ್ತದೆ. ಜೊತೆಗೆ ಅವುಗಳಲ್ಲಿನ ವಿಡಂಬನೆಗಳು ಮಾನವನ ಸಾಮಾಜಿಕ ಜೀವನದ ಅಂಕುಡೊAಕುಗಳನ್ನು ತಿದ್ದವಲ್ಲಿ ಸಹಕಾರಿ ಎನಿಸಿವೆ. ಹಿಂದಿನ ಕಾಲದಿಂದ ಪ್ರಸ್ತುತದ ಕಾಲದವರೆಗೂ ಸಾಮಾಜಿಕ ಪಿಡುಗಾಗಿ ಬಂದಿರುವ ಜಾತಿ ಮತ ಕುಲಗಳ ವ್ಯವಸ್ಥೆ ಇಡೀ ಸಮಾಜದ ಸ್ವಾಸ್ಥö್ಯವನ್ನು ಹಾಳುಮಾಡುತ್ತಿದೆ. ಇಂತಹ ವ್ಯವಸ್ಥೆಯನ್ನು ಕಂಡಿದ್ದರಿAದಲೆ ಸರ್ವಜ್ಞ ಈ ಕೆಳಗಿನಂತೆ ವಿಡಂಬನಾತ್ಮಕವಾಗಿ ಹಾಗೂ ನೇರವಾದ ಮತ್ತು ಕಠೋವಾದ ನುಡಿಗಳಲ್ಲಿ ಹೇಳಿದ್ದಾನೆ.
“ನಡೆವುದೊಂದೇ ಭೂಮಿ ಕುಡಿಯುವುದೊಂದೆ ನೀರು
ಸುಡುವಗ್ನಿಯೊಂದೆ ಇರುತಿರಲು ಕುಲಗೋತ್ರ
ನಡುವೆಯತ್ತಣದು ಸರ್ವಜ್ಞ”
“ಜಾತಿ ಹೀನನ ಮನೆಯ ಜ್ಯೋತಿತಾ ಹೀನವೇ?
ಜಾತಿ-ವಿಜಾತಿ ಎನಬೇಡ ದೇವನೊಲಿ
ದಾತನೇ ಜಾತಾ ಸರ್ವಜ್ಞ”
ಇಲ್ಲಿ ಜಾತಿ, ಕುಲಗೋತ್ರಗಳ ಸಂಕುಲಗಳ ನಡುವೆ ಸಿಕ್ಕು ನರಳಾಡುವ ಮತ್ತು ಶೋಷಣೆಗೆ ಒಳಪಡಿಸುವ ಜನರ ಮನದ ಮಲೀನತೆಯನ್ನು ಸೂಕ್ಷö್ಮವಾಗಿ ಗ್ರಹಿಸಿ ಈ ಜಗದಲ್ಲಿರುವ ಮಾನವ ಸಂಕುಲವೊAದೆ ಆಗಿದ್ದು ಇಲ್ಲಿರುವ ಭೂಮಿಯಾಗಲಿ, ನೀರಾಗಲಿ, ಸುಡುವ ಅಗ್ನಿಯಾಗಲಿ ಎಲ್ಲರಿಗೂ ಒಂದೇ ಆಗಿರುವಾಗ ನಡುವೆ ಕುಲಗೋತ್ರಗಳು ಎತ್ತಣದೆಂದು ಪ್ರಶ್ನಿಸುತ್ತಾನೆ. ಮುಂದುವರೆದು ಜಾತಿ ಹೀನನ ಮನೆಯ ಜ್ಯೋತಿ ತಾ ಹಿನವೇ ಎಂಬ ವಚನದಲ್ಲು ಆತನು ವ್ಯಕ್ತಿ ಯಾವುದೇ ಜಾತಿಯವನಾದರೂ ಅವನ ಮನೆಯಲ್ಲಿ ಬೇಳಗುವ ಜ್ಯೋತಿಯು ಎಲ್ಲಾ ಜಾತಿಯವರ ಮನೆಯಂತೆಯೇ ಬೇಳಗುತ್ತದೆ ಅಂದ ಮೇಲೆ ಜಾತಿ ವಿಜಾತಿಯ ಬಗ್ಗೆ ಯೋಚಿಸುವ ಅಗತ್ಯವಿಲ್ಲ ದೇವನೊಲಿದಾತನೆ ಜಾತಾ ಸರ್ವಜ್ಞ ಎಂದು ಹೇಳಿದ್ದಾನೆ. ಇದೇ ಅಭಿಪ್ರಾಯವನ್ನು ನಾವು ಶಿವಾಗಮಗಳಲ್ಲಿ, ಶಿವಯೋಗಿ ಶಿವಾಚಾರ್ಯರು ರಚಿಸಿದ ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ, ಹನ್ನೆರಡನೆ ಶತಮಾನದ ಶರಣೆ ಶರಣೆಯರ ವಚನಗಳಲ್ಲಿಯೂ ಸ್ಪಷ್ಟವಾಗಿ ಗುರುತಿಸಬಹುದು. ಇವೆಲ್ಲದರಿಂದಾಗಿ ಸರ್ವಜ್ಞನ ಈ ಆಲೋಚನಾಕ್ರಮದ ಮೇಲೆ ಮೇಲಿನವುಗಳ ಪ್ರಭಾವ ಇರುವುದನ್ನು ಅಲ್ಲಗಳಿಯುವಂತಿಲ್ಲ. ಉದಾಹರಣೆಗೆ
ಶಿವಯೋಗಿ ಶಿವಾಚಾರ್ಯರು ರಚಿಸಿದ ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ. “ಬ್ರಾಹ್ಮಣೋಕ್ಷತ್ರಿಯೋವ್ಯಾಪಿ ವೈಶೋ ಶೂದ್ರ ಏವ ವಾ| ಅಂತ್ಯಜೋ ವಾ ಶಿವಭಕ್ತಿಃ ಶಿವನ್ಮಾನ್ಯ ಏವಸಃ||” ಇಲ್ಲಿರುವ ಶ್ಲೋಕವು ಸಹ ಬ್ರಾಹ್ಮಣಾದಿಯಾಗಿ ಯಾರೇ ಆಗಲಿ ಯಾರಲ್ಲಿ ಶಿವಭಕ್ತಿ ನೆಲೆಸುವುದೋ ಆತನು ಶಿವನಂತೆ ಮಾನ್ಯ ಮಾಡಲ್ಪಡುತ್ತಾನೆ ಎಂದು ಹೇಳಲಾಗಿದೆ. ಇಲ್ಲಿ ಶಿವಭಕ್ತಿ ಎಂದರೆ ಬ್ರಹ್ಮಾಂಡದ ಬಗೆಗಿನ ಕಲಿಕೆಯ ಆಸಕ್ತಿಯೆಂದು ಭಾವಿಸಬೇಕಾಗುತ್ತದೆ. ಅಂದರೆ ಬ್ರಹ್ಮಾಂಡದ ವಿಚಾರದಲ್ಲಿ ‘ಮಾನವ ಜಾತಿ ತಾನೊಂದೆವೊಲA’ ಎಂಬ ಪಂಪನ ಮಾತಿನಂತೆ ಒಂದೆ ಆಗಿರುತ್ತದೆ. ಈ ನಿಟ್ಟಿನಲ್ಲಿ ಜಾತಿ, ಕುಲದ ವಿಚಾರದಲ್ಲಿ ಮೇಲು-ಕೀಳು ಭಾವನೆಯುಳ್ಳವರಿಗೆ ಸರ್ವಜ್ಞನ ವಚನಗಳು ಛಾಟಿ ಏಟನ್ನು ನೀಡಿರುವುದನ್ನು ಇಲ್ಲಿ ಗುರುತಿಸಬಹುದಾಗಿದೆ.
ಪ್ರಸ್ತುತದ ಸಮಾಜದಲ್ಲಿನ ಮತ್ತೊಂದು ಬಹುದೊಡ್ಡ ಪಿಡುಗು ಅದು ಸ್ತಿçÃಶೋಷಣೆಯ ವಿವಿಧ ಆಯಾಮಗಳು. ಇವತ್ತಿನ ದಿವಸ ಹಸುಗೂಸಿನಿಂದ ಹಿಡಿದು ವಯೋವೃದ್ಧೆಯರವರೆಗೂ ವಿವಿಧ ರೀತಿಯ ಶೋಷಣೆಗಳು ನಡೆಯುತ್ತಲೆ ಇವೆ. ಈ ಮನೋಸ್ಥಿತಿ ಇಂದಿನದಷ್ಟೆ ಅಲ್ಲ ಹಿಂದಿನ ರಾಮಾಯಣ ಮಹಾಭಾರತ ಕಾಲದಿಂದಲೂ ಬಂದಿರುವುದು ಗಣನೀಯ ಅಂಶ ಅದನ್ನೆ ಸರ್ವಜ್ಞನು ತನ್ನ ವಚನವೊಂದರಲ್ಲಿ ಈ ರಿತಿ ಪ್ರಸ್ಥಾಪಿಸಿದ್ದಾನೆ.
“ಎಂಟೆರಡು ತಲೆಯುಳ್ಳ ಭಂಟರಾವಣ ಕೆಟ್ಟ
ತುಂತ ಕೀಚಕನು ಹೊರ ಹೊಂಟ ಪರಸತಿಯ
ನಂಟು ಬೇಡೆಂದ ಸರ್ವಜ್ಞ”
ಇಲ್ಲಿ ಸಿತೆಯ ಅಪಹರಸಿದ ಹತ್ತು ತಲೆಯ ರಾವಣ, ದ್ರೌಪದಿಯ ಮೋಹಿಸಿದ ಕೀಚಕ ಕ್ರಮವಾಗಿ ರಾಮ, ಮತ್ತು ಭೀಮರಿಂದ ವದಿಸಲ್ಪಟ್ಟ ವಿಚಾರ ಗಣನೀಯ. ಈ ಇಬ್ಬರ ಸಾವಿನ ಹಿಂದೆಯು ಒಬ್ಬ ಹೆಣ್ಣಿನ ಮೇಲೆ ದೌರ್ಜನ್ಯವೇ ಕಾರಣ. ಆದ್ದರಿಂದ ಪರಸ್ತಿçÃಯರ ಸಂಬAಧವಾಗಲಿ, ಪರಸ್ತಿçÃಯರನ್ನು ಅನ್ಯದೃಷ್ಟಿಯಿಂದ ಕಾಣದೆ, ಶೊಷಣೆಗೆ ಒಳಪಡಿಸುವ ಮನಸ್ಸಿನಿಂದ ಕಾಣದೆ ಆಕೆಯನ್ನು ತಾಯಿಯಂತೆ ಭಾವಿಸಬೇಕೆಂದು ಸರ್ವಜ್ಞ ಈ ರೀತಿ ಹೇಳುತ್ತಾನೆ.
“ಅನ್ಯ ಸತಿಯನ್ನು ಕಂಡು ತನ್ನ ಹೆತ್ತವಳೆಂದು
ಮನ್ನಿಸಿ ನಡೆವ ಪುರುಷಂಗೆ ಇಹಪರದಿ
ಮುನ್ನ ಭಯವಿಲ್ಲ ಸರ್ವಜ್ಞ”
ಪ್ರಸ್ತುತ ಸಂದರ್ಭದಲ್ಲಿ ಸ್ವಂತಮಗಳಳನ್ನೆ ಕುಡಿದ ಅಮಲಿನಲ್ಲಿ ಅತ್ಯಾಚಾರಗೈದು ಕೊಲೆಗೈಯುವ, ಕೆಲಸಕ್ಕೆಂದು ಬರುವ ಮಹಿಳೆಯರ ಮೇಲೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುವ ಮನಸ್ಥಿಗಳ ಮದ್ಯೆ ಇವತ್ತು ಹೆಣ್ಣುಮಕ್ಕಳ ಬದುಕಬೇಕಾದ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಪುರುಷರ ಮನೋಸ್ಥಿತಿಗಳು ಬದಲಾಗಬೇಕಾದರೆ ಪೋಷಕರು ತಮ್ಮ ಮಕ್ಕಳಿಗೆ ಮಹಿಳೆಯರನ್ನು ಅಥವಾ ಹೆಣ್ಣುಮಕ್ಕಳನ್ನು ಕಂಡರೆ ಅವರಿಗೆ ಗೌರವ ನೀಡುವಂತಹ ಸಂಸ್ಕಾರ ನೀಡಬೇಕಿದೆ. ಯಾವಾಗ ಪುರುಷರ ಮನದಲ್ಲಿ ಪರಸ್ತಿçÃಯು ತನ್ನ ಹೆತ್ತ ತಾಯಿ ಎಂಬ ಮನೋಭಾವ ಮೂಡುವುದೋ ಆಗಲಾದರು ಹೆಣ್ಣಿನ ಮೇಲೆ ಆಗುತ್ತಿರುವ ದೌರ್ಜನ್ಯಗಳ ಸಂಖ್ಯೆ ಕಡಿಮೆಯಾಗಬಹುದು.
ಹೆಣ್ಣು ಹೊನ್ನು ಮಣ್ಣಿಗಾಗಿಯೇ ರಾಮಾಯಣ, ಮಹಾಭಾರತದ ಕಾಲದಿಂದಲೂ ಯುದ್ಧಗಳು ಸಂಭವಿಸಿ ಅನೇಕ ಸಾವುನೋವುಗಳು ನಡೆಯುತ್ತಲೇ ಬರುತ್ತಿವೆ ಮತ್ತು ಪ್ರಸ್ತುತವು ಸಂಭವಿಸುತ್ತಲೆ ಇವೆ. ಕೇವಲ ಹೆಣ್ಣಿನಿಂದ ಹೊರಟವರು ಮಾತ್ರವಲ್ಲ ಹೊನ್ನು ಮಣ್ಣಿಗಾಗಿಯು ಇಂದಿಗೂ ಅನೇಕ ಕೊಲೆ ಸುಲುಗೆಗಳು, ಭ್ರಷ್ಟಾಚಾರಗಳು ನಡೆಯುತ್ತಲೆ ಇವೆ. ತಮಗೆ ಸಾಲದು ಎಂಬAತೆ ತಮ್ಮ ಮಕ್ಕಳು ಮೋಮ್ಮಕ್ಕಳು ಮರಿಮಕ್ಕಳಿಗೂ ಆಗುವಷ್ಟು ಸಂಪತ್ತನ್ನು ಕೃಢಿಕರಿಸುವವರ ಸಂಖ್ಯೆಗೇನು ಕಮ್ಮಿಯಿಲ್ಲ. ಅಂತಹವರನ್ನು ಕಂಡೆ ಸರ್ವಜ್ಞ ಈ ರೀತಿ ವಿಡಂಬಿಸಿದ್ದಾನೆ.
“ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ
ಕೊಟ್ಟಿದ್ದು ಕೆಟ್ಟಿತೆನ ಬೇಡ ಮುಂದೆ
ಕಟ್ಟಿಹುದು ಬುತ್ತಿ ಸರ್ವಜ್ಞ”
ಈ ವಚನದಲ್ಲಿÀ ಅವಶ್ಯಕತೆಗಿಂತ ಹೆಚ್ಚಿನ ಹಣದ ಕ್ರೋಢಿಕರಣವನ್ನು ಮಾಡುವುದಕ್ಕಿಂತ ಅದನ್ನು ಒಳ್ಳೆಯ ಕಾರ್ಯಗಳಿಗೆ, ದೀನ ದುರ್ಬಲರಿಗೆ ದಾನ ಮಾಡುವ ಮೂಲಕ ಅವರ ಏಳಿಗೆಗೆ ಸಹಾಯಹಸ್ತ ಚಾಚಿದಲ್ಲಿ ಅದರ ಫಲ ಇಂದಲ್ಲ ನಾಳೆ ಸಿಕ್ಕೆಸಿಗುತ್ತದೆ ಎಂದು ಹೇಳಿದ್ದಾನೆ. ಇವತ್ತು ಹಣದ ಕ್ರೋಢಿಕರಣದ ಆಸೆಯಿಂದ ಉಳ್ಳವರು, ಅಧಿಕಾರಿಗಳು, ರಾಜಕಾರಣಿಗಳು ಮಾಡುತ್ತಿರುವ ಭ್ರಷ್ಟಾಚಾರ ಮತ್ತು ದೌರ್ಜನ್ಯಗಳಿಗೆ ಜನ ಸಾಮಾನ್ಯ ಜನರು ನಲುಗಿ ಹೋಗುತ್ತಿದ್ದಾರೆ. ಅದರಲ್ಲಿ ಕೆಲವರಾದರು ಸರ್ವಜ್ಞನ ಮಾತಿನಂತೆ ದಾನಾದಿಗಳನ್ನು ಮಾಡುತ್ತ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ. ಇದರ ನಡುವೆಯೂ ಹಲವಾರು ಜನಗಳು ತಮ್ಮನ್ನು ಆದರ್ಶ ವ್ಯಕ್ತಿಗಳೆಂಬAತೆ ಬಿಂಬಿಸಿಕೊಳ್ಳುತ್ತ ಮೋಸ ವಂಚನೆ ದೌರ್ಜನ್ಯಗಳನ್ನು ಮಾಡುತ್ತಿರುವುದು ಸಮಾಜದ ದೃಷ್ಟಿಯಿಂದ ಬಹುದೊಡ್ಡ ಕಂಟಕವಾಗಿ ಪರಿಣಮಿಸಿದೆ. ಅಂತಹ ಜನಗಳ ಆಚಾರಕ್ಕು ಹೇಳಿಕೆಗೂ ಬಹಳ ಅಂತರವಿರುತ್ತದೆ. ಇಂತಹ ಮನೋಭಾವವನ್ನು ಸರ್ವಜ್ಞ ಟಿಕಿಸುವ ಪರಿ ಹೀಗಿದೆ.
“ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದಡೆ
ಹಿಡಿದಿರ್ದ ಲಿಂಗ ಹೊಡೆ ಮರಳಿ ಕಚ್ಚುವ
ಹೆಡೆನಾಗ ನೋಡ ಸರ್ವಜ್ಞ”
ಪ್ರಸ್ತುತ ಜನ ಜೀವನದಲ್ಲಿ ಹೇಳುವುದಕ್ಕು ಅನುಸರಿಸುವದಕ್ಕು ವ್ಯತ್ಯಾಸ ಕಂಡುಬರುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿ ಅನ್ಯರು ಮಾಡಿದ ತಪ್ಪಿಗೆ ಯಾವರೀತಿ ಶಿಕ್ಷೆಯಾಗಬೇಕೆಂದು ಹೇಳುತ್ತಾನೋ ಅದೇ ತಪ್ಪನ್ನು ತಾನು ಅಥವಾ ತನಗೆ ಬೇಕಾದವರು ಮಾಡಿದಾಗ ಹೇಳುವುದಿಲ್ಲ. ಇಲ್ಲಿ ತನ್ನವರಿಗೊಂದು ನ್ಯಾಯ ಪರರಿಗೆ ಒಂದು ನ್ಯಾಯ, ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬ ಗಾದೆ ಮಾತಿನಂತೆ ಅವನ ವರ್ತನೆ ಇರುವುದನ್ನು ಗಮನಿಸಬಹುದು. ರಾಜಕೀಯ ರಂಗದವರು ನೀಡುವ ಆಶ್ವಾಸನೆಗಳು ಈ ಬಗೆಯವೇ ಆಗಿರುತ್ತವೆ. ಅಂತಹವರು ಏನುಬೇಕಾದರು ಹೇಳಿದಕ್ಕಿಸಿಕೊಳ್ಳಬಲ್ಲರು. ಈತರಹದ ಮನೋಭಾವವುಳ್ಳವರಿಗೆ ಇಂದಲ್ಲ ನಾಳೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂಬ ಉಕ್ತಿ ಈ ಮೇಲಿನ ವಚನದಲ್ಲಿದೆ.
ಅಲ್ಲದೇ ಸರ್ವಜ್ಞ ಅಂದಿನ ಕಾಲದ ಜನರಲ್ಲಿ ಡಾಂಭಿಕ ಭಕ್ತಿಯನ್ನು ಮಾಡುತ್ತಿದ್ದವರು ತರಾಟೆಗೆ ತೆಗೆದುಕೊಂಡAತೆ ಈ ಕೆಳಗಿನ ವಚನದಲ್ಲಿ ಭಾಸವಾಗುತ್ತದೆ.
“ಕೊಲುವ ಕೈಯೊಳು ಪೂಜೆ ಮೆಲುವ ಬಾಯೊಳು ಮಂತ್ರ
ಸಲೆ ಪಾಪವೆರೆದ ಮನದೊಳಗೆ ಪೂಜಿಪನೆ
ಹೊಲೆಯನಿಂ ಕಷ್ಟ ಸರ್ವಜ್ಞ”
ಭರುಶಟಗನ ದೃಢಭಕ್ತಿ ದಿಟವೆಂದು ನೆಚ್ಚಲುಬೇಡ ಎಂಬ ದಾಸಿಮಯ್ಯನ ವಚನದಂತೆ ವ್ಯಕ್ತಿ ತಾನು ಮಾಡುತ್ತಿರುವ ಕೆಲಸಕ್ಕೆ ವ್ಯತಿರಿಕ್ತವಾಗಿ ತಾನು ಮಾಡುತ್ತಿರುವ ಕೆಲಸದಲ್ಲಿ ಶ್ರದ್ಧೆ, ನಿಷ್ಠೆ ಮತ್ತು ಪ್ರಮಾಣಿಕತೆಯ ಇರದೆ ಢಾಂಬಿಕತೆಯಿAದ ಕೂಡಿದ್ದರೆ ಅದು ವ್ಯರ್ಥ ಎಂದು ಸರ್ವಜ್ಞ ಇಲ್ಲಿ ಹೇಳಿದ್ದಾನೆ. ಇಲ್ಲಿ ಬರುವ ಹೊಲೆಯನಿಂ ಎಂಬ ಶಬ್ದವನ್ನು ಕುರಿತಂತೆ ಮಂಜುನಾಥಯ್ಯ ನಾಗರಾಜಯ್ಯ ಎಂಬುವವರು ತಮ್ಮ ಲೇಖವೊಂದರಲ್ಲಿ ಈ ರೀತಿ ಹೇಳಿದ್ದಾರೆ. “ ‘ಹೊಲೆಯ ನಿಂ’ ಎಂಬ ಪದ ಜಾತಿ ಸೂಚಕ ಎನ್ನುವುದಕ್ಕಿಂತ ನೀತಿಯಿಂದ ಅಧಃಪತನಕಂಡ ವ್ಯಕ್ತಿಯನ್ನು ಸೂಚಿಸುತ್ತದೆ ಎಂದರೆ ತುಂಬಾ ಅರ್ಥ ಪೂರ್ಣವಾಗುತ್ತದೆ ಎನಿಸುತ್ತದೆ. ಕೆಲವು ಕಡೆ ಸತ್ತಿರುವ ಹಿರಿಯರನ್ನು ಆರಾಧಿಸುವ ಪದ್ಧತಿಗೆ ಹೊಲೆಯ ಎಂಬ ಅರ್ಥವಿದೆ ಎಂಬುದನ್ನು ಇಮ್ಮಡಿ ಪುಲಕೇಶಿ ಎಂಬ ಲೇಖಕರು ‘ಕರ್ನಾಟ ಬಲ’ ಬ್ಲಾಗಿನಲ್ಲಿ ಉಲ್ಲೇಖಿಸಿದ್ದಾರೆ.” ಇದರಿಂದಾಗಿ ಈ ಪದವನ್ನು ಕೇವಲ ಜಾತಿ ಸೂಚಕವಾಗಿ ಪರಿಗಣಿಸಲಾಗದು. ಆದ್ದರಿಂದ ಅದು ಬೇರೊಂದು ಅರ್ಥವನ್ನೆ ಇಲ್ಲಿ ಪ್ರತಿಪಾದಿಸಿದಂತೆ ತೋರುತ್ತಿದೆ.
ಇದಿಷ್ಟೆ ಅಲ್ಲದೇ ಸಮಾಜದ ಡೊಂಕನ್ನು ತಿದ್ದುವುದು ಸುಲಬವಲ್ಲ ಅದರಲ್ಲು ಏನೇ ಹೇಳಿದರೂ ಕೋಣನ ಮುಂದೆ ಕಿನೂರಿ ಬಾರಿಸಿದಂತೆ ಎಂಬ ಗಾದೆ ಮಾತಿನಂತೆ ನಡೆದುಕೊಳ್ಳುವ ಜನರಿಗೆ ಬುದ್ಧಿ ಹೇಳಿ ಪ್ರಯೋಜನವಿಲ್ಲ ಎಂಬುವುದನ್ನು ಮನಗಂಡAತಹ ಸರ್ವಜ್ಞನು ‘ಮೂರ್ಖರಿಗೆ ನೂರ್ಕಾಲ ಪೇಳಿದರೇನು | ಗೋರ್ಕಲ್ಲ ಮೇಲೆ ನೀರು ಸುರಿದಂತೆ ಸರ್ವಜ್ಞ’ ಎಂದಿರುವುವನು. ಇದಿಷ್ಟೆ ಅಲ್ಲದೇ ‘ÀÀಮುನಿದಂಗೆ ಮುನಿಯದಿರು’, ‘ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಅಥವಾ ಗಂಡ ಹೆಂಡಿರ ಜಗಳ ಗಂಧ ತಿಡಿದಾಂಗ’, ‘ಅಕ್ಕಸಾಲಿಗ ಅಕ್ಕನ ಬಂಗಾರವನ್ನು ಬಿಡ’, ‘ತಾಗಿ ಭಾಗುವುದರಿಂ ತಾಗದೇ ಭಾಗುವುದು’, ‘ಇತ್ತುದನೀಯದನ ಮೃತ್ಯುವೊಯ್ಯದೆ ಬಿಡದು’, ‘ಸಾಲವನು ಕೊಂಬಾಗ ಹಾಲೊಗರುಂಡAತೆ’, ಹೀಗೆ ಅವನ ಅನೇಕ ವಚನಗಳಲ್ಲಿ ವಿಡಂಬನೆಯ ಜೊತೆಜೊತೆಗೆ ನೀತಿಬೋಧೆಯನ್ನು ಮಾಡಿದ್ದಾನೆ. ಈ ಎಲ್ಲಾ ಸರ್ವಜ್ಞನ ವಚನಗಳು ವಾಸ್ತವಕ್ಕೆ ತೀರಾ ಹತ್ತಿರವೆನಿಸುತ್ತವೆ ಮತ್ತು ಆತನ ಪ್ರತಿಯೊಂದು ವಚನಗಳಲ್ಲಿಯೂ ಸಹ ನೈತಿಕಮೌಲ್ಯಗಳು, ವೈಚಾರಿಕತೆ, ಅರಿವಿನ ವಿಸ್ತಾರತೆ, ಮೌಢ್ಯ ಮತ್ತು ಅಂಧಾನುಕರಣೆಯ ನಿರಾಕರಣೆ, ಢಾಂಬಿಕತೆಯ ವಿರೋಧ, ಮಾನವತ್ವದ ಪ್ರತಿಪಾದನೆ ಪ್ರತಿಪಾದಿಸಲ್ಪಟ್ಟಿದೆ.
ಆಕರ/ಪರಾಮರ್ಶನ ಗ್ರಂಥಗಳು/ಲೇಖನಗಳು:
ಸA. ಡಾ. ಜಯರಾಮಯ್ಯ, ಸರ್ವಜ್ಞನ ವಚನಗಳು: ಅಂತರ್ ಶಿಸ್ತೀಯ ಅಧ್ಯಯನ, ಉಷಾಪ್ರಕಾಶನ, ಮೈಸೂರು, ೨೦೨೧
ಪ್ರ. ಸಂ. ಎಚ್.ಎಭಿಕ್ಷಾವರ್ತಿಮಠ, ಪಂಚಾಮೃತ, ಅಧ್ಯಕ್ಷರು ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಸಮಿತಿ, ಹಿರೇಕಲ್ಮಠ ಹೊನ್ನಾಳಿ - ೫೭೭೨೧೭, ದಾವಣಗೆರೆ ಜಿಲ್ಲೆ. ೨೦೦೬
ಸಂ. ಡಾ. ಜಯರಾಮಯ್ಯ ವಿ, ಸರ್ವಜ್ಞನ ವಚನಗಳು: ಅಂತರ್ ಶಿಸ್ತೀಯ ಅಧ್ಯಯನ, ಉಷಾ ಪ್ರಕಾಶನ, ೨೦೨೧
ಸಂ. ಡಾ. ರಾಗೌ, ಸರ್ವಜ್ಞನ ಸಮಗ್ರ ತ್ರಿಪದಿಗಳು, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ. ೨೦೧೩
hಣಣಠಿ://ಞಚಿಡಿಟಿಚಿಣಚಿbಚಿಟಚಿ.bಟogsಠಿoಣ.ಛಿom/೨೦೧೬/೦೮/?m=೧
Comments