ಬಸವರಾಜ ಕಟ್ಟೀಮನಿಯವರ ‘ಬೀದಿಯಲ್ಲಿ ಬಿದ್ದವಳು’ ಕಾದಂಬರಿಯಲ್ಲಿ ಸ್ತ್ರೀ ಅಸ್ಮಿತೆಯ ನೆಲೆಗಳು
- poorna drishti
- Feb 4
- 4 min read
ಆಶಿಕ್
ಸಂಶೋಧನಾರ್ಥಿ, ಕನ್ನಡ ಭಾರತಿ
ಕುವೆಂಪು ವಿಶ್ವವಿದ್ಯಾಲಯ
ದೂರವಾಣಿ: ೯೧೧೩೫೯೦೭೩೬
ಮಿಚಂಚೆ: koppaashik999@gmail.com
Abstract:
ಬಸವರಾಜ ಕಟ್ಟೀಮನಿಯವರು ಪ್ರಗತಿಶೀಲ ಸಾಹಿತ್ಯ ಘಟ್ಟದ ಓರ್ವ ಮಹತ್ತರÀ ಲೇಖಕರಾಗಿದ್ದಾರೆ. ಕಟ್ಟೀಮನಿಯವರು ತಮ್ಮ ಕಾದಂಬರಿಗಳಲ್ಲಿ ಸ್ತಿçÃಯರು ಮತ್ತು ಶೋಷಣೆಗೆ ಒಳಪಟ್ಟವರ ಕುರಿತು ವಿಸ್ತಾರವಾಗಿ ಚಿತ್ರಿಸಿದ್ದಾರೆ. ಕಟ್ಟೀಮನಿಯವರ ವಸ್ತು ವಿಷಯದ ಆಯ್ಕೆ ಎಲ್ಲಾ ಕಾಲಕ್ಕೂ ಅನ್ವಯಿಸುವಂತಹದ್ದು. ಅಂತಹ ಕಾದಂಬರಿಗಳಲ್ಲಿ ಸಾಮಾಜಿಕ ಕಾದಂಬರಿಯಾದ ಬೀದಿಯಲ್ಲಿ ಬಿದ್ದವಳು ಪ್ರಮುಖವಾದದ್ದು. ಕಟ್ಟೀಮನಿಯವರ ಬಹುತೇಕ ಕಾದಂಬರಿಗಳ ಉದ್ದೇಶ ಸಮಾಜದ ಸಮಸ್ಯೆಗಳನ್ನು ಚಿತ್ರಿಸುವುದು. ಬೀದಿಯಲ್ಲಿ ಬಿದ್ದವಳು ಕಾದಂಬರಿಯ ಮೂಲಕ ಸಮಾಜದ ಅವ್ಯವಸ್ಥೆಯ, ತೆರ ಸಮಸ್ಯೆಯನ್ನು, ಊಳಿಗಮಾನ್ಯ ವ್ಯವಸ್ಥೆಯ ಕರಾಳ ಮುಖವನ್ನು, ನಗರ ವ್ಯವಸ್ಥೆಯ ಚಿತ್ರಣವನ್ನು ಕಾದಂಬರಿಯ ಪಾತ್ರಗಳ ಮೂಲಕ ಚಿತ್ರಿಸಲಾಗಿದೆ. ಹೆಣ್ಣೊಬ್ಬಳು ವೇಶ್ಯೆಯಾಗಲು ಕಾರಣವಾಗುವ ಸಾಮಾಜಿಕ ವ್ಯವಸ್ಥೆಯ ಹಲವು ಮುಖಗಳನ್ನು ಬಯಲು ಮಾಡುವ ಪ್ರಯತ್ನ ಮಾಡಿದ್ದಾರೆ. ಸಾಮಾಜಿಕ ಬದುಕಿನಲ್ಲಿ ಪುರುಷರಿಗಿಂತ ಹೆಣ್ಣು ಹೇಗೆ ಕ್ರೌರ್ಯ, ದೌರ್ಜನ್ಯಕ್ಕೆ ಒಳಪಟ್ಟಿದ್ದಾಳೆ ಎಂಬ ವಿಸ್ತೃತ ವಿವರಣೆ ಈ ಕಾದಂಬರಿಯಲ್ಲಿದೆ.
Key Words: ಬಸವರಾಜ ಕಟ್ಟೀಮನಿ, ಪ್ರಗತಿಶೀಲ ಸಾಹಿತ್ಯ, ಬೀದಿಯಲ್ಲಿ ಬಿದ್ದವಳು, ಯಮುನಾ, ರಾಮ, ರುದ್ರಪ್ಪಗೌಡ, ಸಿದ್ಧರಾಯಪ್ಪ
ಬಸವರಾಜ ಕಟ್ಟೀಮನಿಯವರು ಪ್ರಗತಿಶೀಲ ಸಾಹಿತ್ಯ ಘಟ್ಟದ ಓರ್ವ ಮಹತ್ತರÀ ಲೇಖಕರಾಗಿದ್ದಾರೆ. ನವೋದಯ ಸಾಹಿತ್ಯದ ನಂತರ ಬಂದ ಪ್ರಗತಿಶೀಲ ಸಾಹಿತ್ಯವು ಸುಮಾರು ೧೦ ರಿಂದ ೧೨ ವರ್ಷಗಳ ಕಾಲ ಸಾಮಾಜಿಕ ಸಮಸ್ಯೆಗಳ, ಸ್ವತಂತ್ರ ಪೂರ್ವ ಮತ್ತು ಸ್ವತಂತ್ರ ನಂತರದ ಬಹುತೇಕ ಕಥೆ, ಕಾದಂಬರಿಗಳನ್ನು ಕೊಡುಗೆಯಾಗಿ ನೀಡುವಲ್ಲಿ ಯಶಸ್ವಿಯಾಗಿದೆ. ವಚನ ಸಾಹಿತ್ಯದ ನಂತರ ಹೋರಾಟ ಮತ್ತು ಬಂಡಾಯದ ಸ್ವರೂಪಗಳನ್ನು ನಾವು ಪ್ರಗತಿಶೀಲರಲ್ಲಿ ಕಾಣಬಹುದು. ಈ ಕಾಲಘಟ್ಟವು ಅನೇಕ ಸಹೃದಯಿ-ಓದುಗರನ್ನು ಸೃಷ್ಟಿಸಿತ್ತು. ಅ. ನ.ಕೃ, ನಿರಂಜನ, ತ.ರಾ.ಸು, ಭಾರತೀಸುತ, ತ್ರಿವೇಣಿ, ಅನುಪಮಾ ನಿರಂಜನ, ಚದುರಂಗರAತಹ ಮಹತ್ವದ ಲೇಖಕರು ಪ್ರಗತಿಶೀಲ ಸಾಹಿತ್ಯದ ಪಂಥದವರಾಗಿದ್ದರು.
೧೮-೧೯ನೇ ಶತಮಾನದಲ್ಲಿ ಪಾಶ್ಚಿಮಾತ್ಯ ರಾಷ್ಟçಗಳಲ್ಲಿ ನಡೆದ ಪ್ರೋಗ್ರೆಸ್ಸಿವ್ ಲಿಟರೇಚರ್‌ನ ರೂಪವೇ ಪ್ರಗತಿಶೀಲ ಸಾಹಿತ್ಯವಾಗಿದೆ. ಐರೋಪ್ಯ ರಾಷ್ಟçಗಳಲ್ಲಿ ಅದರಲ್ಲೂ ಪ್ರಮುಖವಾಗಿ ರಷ್ಯಾದ ಸಾಹಿತ್ಯ ಪ್ರಪಂಚದಲ್ಲಿ ಪ್ರಗತಿಶೀಲ ಸಾಹಿತ್ಯವೇ ಅತ್ಯಂತ ಪ್ರಮುಖ ಘಟ್ಟವಾಗಿದೆ. ಈ ಸಾಹಿತ್ಯಕ್ಕೆ ಮ್ಯಾಕ್ಸಿಂ ಗಾರ್ಕಿ, ರೋಮರೋಲ, ಹೆನ್ರಿ ಬಾರ್ಬೊದ ಮೊದಲಾದವರು ಕೊಡುಗೆ ನೀಡಿದ್ದಾರೆ. ಸಜ್ಜದ್ ಜಾಹೀರ್, ಮುಲ್ಕ್ರಾಜ್ ಆನಂದ್, ಕೆ.ಎ.ಅಬ್ಬಾಸ್ ಮೊದಲಾದವರು ಭಾರತದಲ್ಲಿ ಪ್ರಗತಿಶೀಲ ಸಾಹಿತ್ಯವನ್ನು ಪರಿಚಯಿಸಿದರು. ಪ್ರಗತಿಶೀಲ ಲೇಖಕರ ಪ್ರಥಮ ಅಧಿವೇಶನ ಲಕ್ನೋದಲ್ಲಿ ೧೯೩೬ರಲ್ಲಿ ಪ್ರೇಮ್‌ಚಂದ್‌ರವರ ಅಧ್ಯಕ್ಷತೆಯಲ್ಲಿ ಜರುಗಿತ್ತು. ಮುಂದೆ ಇದು ಕರ್ನಾಟಕದಲ್ಲಿ ಅ.ನ.ಕೃ ಅವರ ಅಧ್ಯಕ್ಷತೆಯಲ್ಲಿ ‘ಕರ್ನಾಟಕ ಪ್ರಗತಿಶೀಲ ಲೇಖಕರ ಸಂಘ’ವೆAದು ಸ್ಥಾಪನೆಯಾಯಿತು. ಪ್ರಗತಿಶೀಲ ಸಾಹಿತ್ಯವು ಕರ್ನಾಟಕದಲ್ಲಿ ಪ್ರಚಲಿತವಿದ್ದರೂ ಅದು ಕೇಂದ್ರೀಕೃತವಾಗಿದ್ದು ಬೆಂಗಳೂರಿನಲ್ಲಿ ಮಾತ್ರ. ಆದರೆ ಅದನ್ನು ಉತ್ತರ ಕರ್ನಾಟಕದ ಭಾಗಕ್ಕೆ ಪಸರಿಸಿದ ಕೀರ್ತಿ ಬಸವರಾಜ ಕಟ್ಟೀಮನಿಯವರಿಗೆ ಸಲ್ಲುತ್ತದೆ.
ಕನ್ನಡ ಸಾಹಿತ್ಯ ಲೋಕದಲ್ಲಿ ಕಾದಂಬರಿಗಳು ಮಹತ್ವದ ಸ್ಥಾನವನ್ನು ಹೊಂದಿದೆ. ಇದು ಮನರಂಜನೆಯ ಪ್ರಕಾರವಾಗಿದ್ದು, ಕುವೆಂಪುರವರು ಇದನ್ನು ‘ಕರತಲ ರಂಗಭೂಮಿ’ ಎಂದು ಕರೆದಿದ್ದಾರೆ. ಕಟ್ಟೀಮನಿಯವರು ತಮ್ಮ ಕಾದಂಬರಿಗಳಲ್ಲಿ ಸ್ತಿçÃಯರು ಮತ್ತು ಶೋಷಣೆಗೆ ಒಳಪಟ್ಟವರ ಕುರಿತು ವಿಸ್ತಾರವಾಗಿ ಚಿತ್ರಿಸಿದ್ದಾರೆ. ಕಟ್ಟೀಮನಿಯವರ ವಸ್ತು-ವಿಷಯದ ಆಯ್ಕೆ ಎಲ್ಲಾ ಕಾಲಕ್ಕೂ ಅನ್ವಯಿಸುವಂತಹದ್ದು. ಅಂತಹ ಕಾದಂಬರಿಗಳಲ್ಲಿ ಸಾಮಾಜಿಕ ಕಾದಂಬರಿಯಾದ ‘ಬೀದಿಯಲ್ಲಿ ಬಿದ್ದವಳು’ ಪ್ರಮುಖವಾದದ್ದು. ಈ ಕಾದಂಬರಿಯಲ್ಲಿ ಹೆಣ್ಣೊಬ್ಬಳು ಜೀವನದ ಪರ್ಯಾಂತ ಎದುರಿಸುವ ಸಮಸ್ಯೆ ಕುರಿತು ಚಿತ್ರತವಾಗಿದೆ. ಸೂಕ್ಷö್ಮವಾಗಿ ಗಮನಿಸಿದರೆ ವಾಸ್ತವ ಬದುಕಿನಲ್ಲಿ ಒಂದು ಹೆಣ್ಣು ಅನುಭವಿಸುವ ತಲ್ಲಣಗಳನ್ನು ಕಟ್ಟೀಮನಿಯವರು ಈ ಕಾದಂಬರಿಯಲ್ಲಿ ನೈಜವಾಗಿ ಹೆಣೆದಿದ್ದಾರೆ. “ಕಟ್ಟೀಮನಿಯವರ ಕಾದಂಬರಿಯ ಲೋಕ ಮುಗ್ಧತೆ ಮತ್ತು ವಾಸ್ತವತೆಗಳ ನಡುವಿನ ಮುಖಾಮುಖಿಯ ಲೋಕ. ವಾಸ್ತವವನ್ನು ವಿರೂಪಗೊಳಿಸದೆ ಚಿತ್ರಿಸಬೇಕೆಂಬ ರೊಚ್ಚಿನ ಜೊತೆ ಜೊತೆಯಲ್ಲಿಯೇ ತನ್ನ ಕುಂದು-ಕೊರತೆಗಳ ಬಗ್ಗೆಯೂ ಸದಾ ಕೊರಗುವ ದೃಷ್ಟಿಕೋನ ಅಲ್ಲಿನದು.”
‘ಬೀದಿಯಲ್ಲಿ ಬಿದ್ದವಳು’ ಕಾದಂಬರಿ ೧೯೫೨ರಲ್ಲಿ ಪ್ರಕಟವಾಗಿದೆ. ಇದೊಂದು ಸಾಮಾಜಿಕ ಕಾದಂಬರಿಯಾಗಿದ್ದು ವೇಶ್ಯಾ ಬದುಕಿನ ಚಿತ್ರಣವನ್ನು ಮತ್ತು ಅವರ ಬದುಕಿನಲ್ಲಾಗುವ ಸಮಸ್ಯೆಗಳನ್ನು ಒಳಗೊಂಡಿರುವ ಕಥೆಯಾಗಿದೆ. “ಹೆಣ್ಣು ತಾನಾಗಿಯೇ ವೇಶ್ಯೆಯಾಗಲು ಬಯಸುವುದಿಲ್ಲ ಸಮಾಜ ಅವಳನ್ನು ವೇಶ್ಯೆಯನ್ನಾಗಿ ಮಾಡುತ್ತದೆ ಎಂಬ ಸಿದ್ಧಾಂತವನ್ನು ಎದುರುಗಿಟ್ಟುಕೊಂಡು ಬರೆದ ಕಾದಂಬರಿ ಬೀದಿಯಲ್ಲಿ ಬಿದ್ದವಳು.”
ಕಾದಂಬರಿಯ ಕೇಂದ್ರ ಪಾತ್ರವಾದ ಯಮುನಾಳ ವೇಶ್ಯಾ ಜೀವನದ ಕುರಿತು ಮತ್ತು ಅವಳಿಗೆ ಬಾಲ್ಯದಿಂದ ಎದುರಾದ ಸಂದರ್ಭಗಳು, ಸಮಾಜ ಅವಳಿಗೆ ಒಡ್ಡಿದ ಸಮಸ್ಯೆಗಳು, ಅದಕ್ಕೆ ಅವಳು ತೋರಿದ ಪ್ರತಿರೋಧಗಳ ಕುರಿತು ವಿಸ್ತೃತವಾಗಿ ಚಿತ್ರಿಸಿದೆ. ಪ್ರಾರಂಭದಲ್ಲಿ ಯಮುನಾಳ ಪರಿಚಯವನ್ನು ಕುರಿತು ನಾಂದಿ ಭಾಗದಲ್ಲಿ ವಿವರಿಸಿದರೆ, ಮುಂದೆ ಅಂಕ ೧ ಮತ್ತು ಅಂಕ ೨ರಲ್ಲಿ ೨೧ ಮತ್ತು ೮ ತೆರೆಗಳೊಡನೆ ಯಮುನಾಳ ಕತೆ ಚಿತ್ರತವಾಗಿದೆ. ಅಂತ್ಯಭಾಗದಲ್ಲಿ ಭರತ ವಾಕ್ಯದೊಂದಿಗೆ ಕಾದಂಬರಿಯು ಸಮಾರೋಪಗೊಳ್ಳುತ್ತದೆ.
ಈ ಕಾದಂಬರಿಯಲ್ಲಿ ಲೇಖಕರೇ ನಿರೂಪಕರಾಗಿ ಚಿತ್ರಿತರಾಗಿದ್ದಾರೆ. ಮೊದಲ ಭಾಗವು ಓದುಗರಿಗೆ ಸ್ವಲ್ಪ ಗೊಂದಲಮಯವಾದರೂ ತದನಂತರ ಕಾದಂಬರಿ ಗಟ್ಟಿಯಾಗಿ ನೆಲೆಗೊಳ್ಳುತ್ತದೆ. ತನ್ನ ಗೆಳೆಯನನ್ನು ಭೇಟಿ ಮಾಡಲು ಬಂದ ನಿರೂಪಕ(ಲೇಖಕ) ರಸ್ತೆಯಲ್ಲಿ ಬಿದ್ದಿದ್ದ ಹೆಣ್ಣನ್ನು ಕತ್ತಲಲ್ಲಿ ಎಡವಿದಾಗ ಆತನ ಗೆಳೆಯ ಅವಳನ್ನು ಯಮುನಾ ಎಂದು ಗುರುತಿಸುತ್ತಾನೆ. ತದನಂತರ ಯಮನಾಳ ಕಥೆಯನ್ನು ಲೇಖಕರು ಕೇಳಿ ತಿಳಿಯುವುದೇ ‘ಬೀದಿಯಲ್ಲಿ ಬಿದ್ದವಳು’ ಕಾದಂಬರಿಯ ವಸ್ತು. ಈ ಕಾದಂಬರಿಯಲ್ಲಿ ಅಲ್ಲಲ್ಲಿ ಫ್ಲಾಶ್‌ಬ್ಯಾಕ್ ಕಥನ ತಂತ್ರವನ್ನು ಲೇಖಕರು ಬಳಸಿದ್ದಾರೆ.
“ಹಳ್ಳಿಯ ಬಡ ಹುಡುಗಿಯೊಬ್ಬಳ ಕರುಣ ಕಥೆಯನ್ನು ಹೇಳುವ ಈ ಕಾದಂಬರಿಯನ್ನು ಸಾಮಾನ್ಯವಾಗಿ ಎಲ್ಲರೂ ಮೆಚ್ಚಿಕೊಂಡರು. ಇಲ್ಲಿನ ಕಥಾನಾಯಕಿ ಯಮುನಾ ತನ್ನ ಇಚ್ಚೆಗೆ ವಿರುದ್ಧವಾಗಿ ವೇಶ್ಯೆಯಾಗಬೇಕಾದ ಪ್ರಸಂಗ ಬರುತ್ತದೆ; ನಗರದ ಸೂಳೆಯರ ಘೋರ ಜೀವನದ ಚಿತ್ರಣವು ಇಲ್ಲಿ ಕಾಣಿಸಿಕೊಳ್ಳುತ್ತದೆ. ‘ವೇಶ್ಯೆ’ ಎಂಬ ಶಬ್ಧ ಕೇಳಿದರು ಮೂಗು ಮುರಿಯುವ ಮಡಿವಂತರು ಕೂಡ ಇಲ್ಲಿನ ಸತ್ಯ ಚಿತ್ರಣವನ್ನು ಸ್ವಾಗತಿಸಿದರೆಂಬುದೊAದು ಸಮಾಧಾನದ ವಿಚಾರ”
ರೈಲು ಹಳಿಗಳ ಮೇಲೆ ದೇಹವನ್ನೊರಗಿಸಿ ಸಾಯಲು ಸಿದ್ಧವಾಗಿದ್ದ ಯಮುನಾಳ ಚಿತ್ರಣದೊಂದಿಗೆ ಕಾದಂಬರಿ ಆರಂಭವಾಗುತ್ತದೆ. ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧಳಾಗಿದ್ದ ಯಮುನಾಳ ಜೀವವನ್ನು ಉಳಿಸಿ ಜೀವನಕ್ಕೆ ಮತ್ತೊಂದು ದಾರಿಯನ್ನು ತೋರಿದವನೇ ಬಾಟಲಿ ಬಾಬು.
ಯಮುನಾಳ ಜೀವನದ ಎರಡು ಘಟ್ಟಗಳನ್ನು ಕಾದಂಬರಿಯಲ್ಲಿ ಎರಡು ಅಂಕಗಳಲ್ಲಿ ವಿಭಾಗಿಸಲ್ಪಟ್ಟಿದೆ. ಬಾಟಲಿ ಬಾಬು ಯಮುನಾಳನ್ನು ಬದುಕಿಸಿ ಹಳ್ಳಿಗಳ ನಡುವಿನ ಒಂದು ಓಣಿಗೆ ಕರೆದುಕೊಂಡು ಬರುತ್ತಾನೆ. ಅದು ವೇಶ್ಯೆಯರ ಓಣಿ ಎಂದು ತಿಳಿದಾಗ “ವೇಶ್ಯೆಯ ಬಾಳಿನಿಂದ ಪಾರಾಗುವುದಕ್ಕಾಗಿಯೇ ರೈಲಿನ ಕೆಳಗೆ ಬೀಳಲು ಹೋಗಿದ್ದ ತಾನು ಮತ್ತೆ ವೇಶ್ಯೆಯರ ಪ್ರಪಂಚಕ್ಕೆ ಬಂದು ಬೀಳುವಂಥಾಯ್ತಲ್ಲ” ಎಂದು ಪರಿತಪಿಸಿದಳು.
ಓಣಿಯ ಹೆಂಗಸರಿಗೆ ತನ್ನ ಹಿಂದಿನ ಪರಿಸ್ಥಿತಿಯನ್ನು ಹೇಳತೊಡಗುತ್ತಾಳೆ. ಹಳ್ಳಿಯ ಬಡ ಕುಟುಂಬದಲ್ಲಿ ಹುಟ್ಟಿದ ಸುಂದರ ಯುವತಿ ಯಮುನಾ. ಸಣ್ಣವಳಿದ್ದಾಗ ರುದ್ರಪ್ಪಗೌಡರ ಆಳುಮಗನಾದ ರಾಮನ ಜೊತೆ ಮದುವೆ ಆಟ ಆಡಿದಾಗಿಂದ ರಾಮನೇ ತನ್ನ ಗಂಡನೆAದು ನಿಶ್ಚಯಿಸಿರುತ್ತಾಳೆ. ಆದರೆ ಅವಳಿಗೆ ಮದುವೆಯ ಪರಿಕಲ್ಪನೆಯೇ ತಿಳಿಯದ ವಯಸ್ಸಿಗೆ ಚಿಕ್ಕಳ್ಳಿಯ ಭೀಮನೊಡನೆ ಮದುವೆ ಮಾಡಿಸುತ್ತಾರೆ.
ತನ್ನ ತಾಯಿ ಗಂಗವ್ವ ‘ತೆರ’ದ ಹಣ ಕೊಡುವವರೆಗೂ ಯಮುನಾಳನ್ನು ಗಂಡನ ಮನೆಗೆ ಕಳುಹಿಸುವುದಿಲ್ಲವೆಂದು ಹಠ ಹಿಡಿದಿದ್ದಳು.ಈ ಕಾರಣದಿಂದ ಭೀಮಣ್ಣ ಸೋಡಾಚೀಟಿ (ವಿಚ್ಛೇದನ) ನೀಡಲು ಮುಂದಾಗುತ್ತಾನೆ. ನಂತರ ಊರಿನ ಗೌಡರಾದ ರುದ್ರಪ್ಪಗೌಡರ ವಕ್ರದೃಷ್ಟಿ ಯಮುನಾಳ ಮೇಲೆ ಬೀಳುತ್ತದೆ. “ಅವಳ ಮಗಳನ್ನು ಸೂಳೆಯಾಗಿ ಮಾಡೇ ಬಿಡೋಣ, ಹಂಗ ಮಾಡದಿದ್ದರೆ ನನ್ನ ಹೆಸರು ರುದ್ರಗೌಡನಲ್ಲ” ಎಂದು ಪಣತೊಟ್ಟಿದ್ದನು. ಇತ್ತ ಯಮುನಾಳ ಗಂಡ ನಿಂಗಿ ಎಂಬಾಕೆಯನ್ನು ಮದುವೆ ಮಾಡಿಕೊಳ್ಳುತ್ತಾನೆ. ತನ್ನ ಬದುಕಿನಲ್ಲಿ ಒದಗಿಬಂದ ಈ ತೆರನಾದ ಪರಿಸ್ಥಿತಿ, ನೋವು, ಅವಮಾನ, ನರಕಯಾತನೆಯ ಬಾಳಿನಿಂದ ಯಮುನಾ ಶೆಟ್ಟರ ಆಳುಮಗನಾದ ಮಲ್ಲಪ್ಪನೊಡನೆ ಕುಡಿದು ಆತನನ್ನು ಆಲಂಗಿಸಿ, ದೈಹಿಕ ಸುಖವನ್ನು ಅನುಭವಿಸುತ್ತಾಳೆ.
ಯಮುನಾಳ ಬದುಕು ಸೂತ್ರವಿಲ್ಲದ ಗಾಳಿಪಟದಂತಾಯಿತು. ಕೆಲ ದಿನಗಳಲ್ಲಿಯೇ ಗರ್ಭಿಣಿಯಾದ ಯಮುನಾಳನ್ನು ಗಂಡನು ಮನೆಯಿಂದ ಹೊರ ಕಳುಹಿಸಿದ್ದನು. ತಾನು ನಂಬಿದ್ದ ಮಲ್ಲಪ್ಪ ಕೂಡ ಕೈ ಬಿಟ್ಟನೆಂದು ತಿಳಿದು ದುಃಖಿತಳಾದಳು. ಕೊನೆಗೆ ಬಸಲಿಂಗವ್ವನ ಚಹಾದಂಗಡಿಯಲ್ಲಿ ಆಶ್ರಯ ದೊರೆತಿದ್ದಕ್ಕೆ ನೆಮ್ಮದಿಯ ಉಸಿರು ಬಿಡುವಾಗಲೇ ಅದು ಕೂಡ ವೇಶ್ಯಾವಾಟಿಕೆಯ ಜಾಗ ಎಂದು ಕ್ರಮೇಣವಾಗಿ ತಿಳಿಯಿತು. ಚಹಾದ ಅಂಗಡಿಯಲ್ಲಿ ಆಶ್ರಯಕ್ಕಾಗಿ ನೆಲೆಸಿದ್ದಾಗ ರುದ್ರಪ್ಪಗೌಡನ ಕ್ರೌರ್ಯಕ್ಕೆ ಬಲಿಯಾಗಿ ದೇಹವನ್ನು ನೀಡಬೇಕಾಗುತ್ತದೆ. ಇದನ್ನು ವೀರೊಧಿಸಲು ಬಂದ ರಾಮುವಿಗೆ ಥÀಳಿಸುತ್ತಾನೆ.ಇದರಿಂದ ಮನನೊಂದು ಸಾಯಲು ಹೊರಟ ಯಮುನಾಳನ್ನು ಬದುಕಿಸಿ ಸೂಳೆಗೇರಿಗೆ ತರುವವನೇ ಬಾಟಲಿ ಬಾಬು.
ಎರಡನೇ ಅಂಕದಲ್ಲಿ ಯಮುನಾಳ ಜೀವನದ ತಿರುವಿನ ಘಟ್ಟವಾದ ಓಣಿಯ ಚಿತ್ರಣ ಮತ್ತು ಅದರ ಸಮಸ್ಯೆಗಳನ್ನು ವಿವರಿಸಿದ್ದಾರೆ. ದಿನ ಕಳೆದಂತೆ ಅಲ್ಲಿನವರಾದ ಫಾತಿಮಾ, ಮಲ್ಲಿ, ಯಶೋಧ, ದುರ್ಗವ್ವ, ಸಾವಿತ್ರಿ, ಹಣಮ್ಯ, ಭಾಗೀರಥಿ ಮೊದಲಾದವರು ಅವಳ ಆತ್ಮೀಯರಾಗುತ್ತಾರೆ. ಮುಂದೆ ಯಮುನಾಳು ಸಿದ್ಧರಾಯಪ್ಪನ ಖಾಯಂ ಸಂಬAಧ ಬೆಳೆಸುತ್ತಾಳೆ. “ನಟಿಸುವುದೇ ತನ್ನ ಕೆಲಸ, ವೇಶ್ಯೆ ಪಾತ್ರದ ನಟನೆ” ಎಂದುಕೊAಡು ಯಮುನಾ ಜೀವನ ಕಳೆಯುತ್ತಾಳೆ. ಸಿದ್ಧರಾಯಪ್ಪನು ಯಮುನಾಳಿಗೆ ಬಾಡಿಗೆ ಮನೆ, ಮನೆಗೆ ಅಗತ್ಯವಿರುವ ಸಾಮಗ್ರಿ, ದೈನಂದಿನ ವಸ್ತು, ಒಡವೆಗಳನ್ನು ನೀಡಿ ಸಂತೋಷವಾಗಿ ನೋಡಿಕೊಳ್ಳುತಿರುತ್ತಾನೆ.
ಹೀಗಿರುವಾಗ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ನೆನಪಿಸಿಕೊಂಡು ಯಮುನಾ ವ್ಯಥೆಪಡುತಿದ್ದಾಗ ಯಮುನಾಳನ್ನು ಕಂಡು ಮಲ್ಲಿ “ಈ ಓಣಿ ಒಳಗ ಇರುವವರೊಳಗ ಒಬ್ಬಳು ತಾನಾಗೆ ಸಂತೋಷದಿAದ ವೇಶ್ಯಾಗಾರಿಕೆ ಮಾಡುತ್ತಾ ಇಲ್ಲ, ಒಬ್ಬೊಳಿಗೆ ಒಂದು ಸಂಕಟ ಬಂದಿದ್ದರಿAದ ಈ ನರಕಕ್ಕೆ ಬಂದು ಬಿದ್ದಿವಿ” ಎಂದು ನೋವಿನಿಂದ ಹೇಳುತ್ತಾಳೆ. ಈ ಮಾತುಗಳಲ್ಲಿ ವೇಶ್ಯಾಗಾರಿಕೆಗೆ ಬಂದ ಹೆಣ್ಣಿನ ನರಕ ಸಾದೃಶ್ಯ ಯಾತನೆ, ಮನೆಯ ಪರಿಸ್ಥಿತಿ, ಬಡತನ, ಹಸಿವಿನ ದಾರುಣ ಚಿತ್ರಣವಿದೆ.
ಹೀಗಿರುವಾಗ ತನ್ನ ಪ್ರಿಯಕರ ರಾಮ ಅದೇ ಓಣಿಯ ಬೇರೊಬ್ಬಾಕೆಯ ಸಂಗ ಮಾಡಿ ರೋಗ ಹಚ್ಚಿಕೊಳ್ಳುತ್ತಾನೆ. ತಾನು ಪ್ರೀತಿಸಿದ ರಾಮುವಿನ ರೋಗ ವಾಸಿ ಮಾಡಲು ಯಮುನೆಯು ದುಡಿತಕ್ಕೆ ತೊಡಗುತ್ತಾಳೆ. ರಾಮನ ರೋಗ ವಾಸಿ ಮಾಡಲು ಹೋಗಿ ಸಿದ್ಧರಾಯಪ್ಪನನ್ನು ದೂರ ಮಾಡಿಕೊಳ್ಳುತ್ತಾಳೆ. ರಾಮನ ರೋಗವಾಸಿಯಾಗಿ ಇನ್ನೇನು ಚೆಂದದ ಬದುಕು ಕಾಣುವ ಹೊತ್ತಿಗೆ ರುದ್ರೇಗೌಡರು ಮತ್ತೆ ಅವಳ ಬದುಕಿಗೆ ಬರುತ್ತಾರೆ. ಪ್ರತಿಭಟಿಸಲು ಹೋದ ರಾಮನನ್ನು ಥಳಿಸುತ್ತಾರೆ. ತುಳಿತಕ್ಕೊಳಾಗಾದ ರಾಮ ಆಸ್ಪತ್ರೆಯಲ್ಲಿ ಪ್ರಾಣಬಿಡುತ್ತಾನೆ. “ಯಮುನಾ ಬೀದಿಯ ಪಾಲಾದಳು, ತಂದೆ ಸತ್ತು ಹೋಗಿದ್ದ, ತಾಯಿ ಜೈಲಿನಲ್ಲಿದ್ದಳು, ಬಾಳಿನುದ್ದಕ್ಕೂ ಆ ಬಡ ಹುಡುಗಿಗೆ ಸಂಕಟ ಎದುರಾಗಿತ್ತು, ಒಂದೇ ಒಂದು ಆಶಾ ತಂತುವಾಗಿದ್ದ ಪ್ರಿಯಕರನನ್ನು ತುಳಿದು ಕೊಂದರು. ಆತನ ಶವವನ್ನು ಆಸ್ಪತ್ರೆಯಲ್ಲಿ ನೋಡಿ 'ರಾಮ ರಾಮ ರಾಮ'ಎಂದು ಆಸ್ಪತ್ರೆಯಿಂದ ಓಡಿ ಹೋದಳಂತೆ- ಹುಚ್ಚಿಯಂತೆ” ರಾಮನ ಜಪದಲ್ಲಿ ಇದ್ದ ಯಮುನಾ ಹುಚ್ಚಿಯಾಗಿ ಬೀದಿಯ ಪಾಲಾಗುತ್ತಾಳೆ.
ಕಟ್ಟೀಮನಿಯವರ ಬಹುತೇಕ ಕಾದಂಬರಿಗಳ ಉದ್ದೇಶ ಸಮಾಜದ ಸಮಸ್ಯೆಗಳನ್ನು ಚಿತ್ರಿಸುವುದು. ಬೀದಿಯಲ್ಲಿ ಬಿದ್ದವಳು ಕಾದಂಬರಿಯ ಮೂಲಕ ಸಮಾಜದ ಅವ್ಯವಸ್ಥೆಯ, ತೆರ ಸಮಸ್ಯೆಯನ್ನು, ಊಳಿಗಮಾನ್ಯ ವ್ಯವಸ್ಥೆಯ ಕರಾಳ ಮುಖವನ್ನು, ನಗರ ವ್ಯವಸ್ಥೆಯ ಚಿತ್ರಣವನ್ನು ಕಾದಂಬರಿಯ ಪಾತ್ರಗಳ ಮೂಲಕ ಚಿತ್ರಿಸಲಾಗಿದೆ. ಹೆಣ್ಣೊಬ್ಬಳು ವೇಶ್ಯೆಯಾಗಲು ಕಾರಣವಾಗುವ ಸಾಮಾಜಿಕ ವ್ಯವಸ್ಥೆಯ ಹಲವು ಮುಖಗಳನ್ನು ಬಯಲು ಮಾಡುವ ಪ್ರಯತ್ನ ಮಾಡಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ ಶಕ್ತರಾಗಿರುವವರು ಬಡವರನ್ನು, ದಲಿತರನ್ನು, ಹಿಂದುಳಿದವರನ್ನು ಹೇಗೆ ತಮ್ಮ ದರ್ಪದಿಂದ ದೌರ್ಜನ್ಯಕ್ಕೆ ಒಳಪಡಿಸಿದ್ದಾರೆ ಎಂಬ ಚಿಂತನ ಕ್ರಮವನ್ನು ನಾವಿಲ್ಲಿ ಕಾಣಬಹುದು. ಸಾಮಾಜಿಕ ಬದುಕಿನಲ್ಲಿ ಪುರುಷರಿಗಿಂತ ಹೆಣ್ಣು ಹೇಗೆ ಕ್ರೌರ್ಯ, ದೌರ್ಜನ್ಯಕ್ಕೆ ಒಳಪಟ್ಟಿದ್ದಾಳೆ ಎಂಬ ವಿಸ್ತೃತ ವಿವರಣೆ ಈ ಕಾದಂಬರಿಯಲ್ಲಿದೆ.
ಆಕರ ಗ್ರಂಥ:
ಬಸವರಾಜ ಕಟ್ಟೀಮನಿ, ಬೀದಿಯಲ್ಲಿ ಬಿದ್ದವಳು, ಬಸವರಾಜ ಕಟ್ಟೀಮನಿ ಸಮಗ್ರ ಸಾಹಿತ್ಯ ಸಂ.೩, ಪ್ರಸಾರಾಂಗ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ, ೨೦೧೪
ಪರಾಮರ್ಶನ ಗ್ರಂಥಗಳು:
ಬಸವರಾಜ ಸಾದರ, ಬಸವರಾಜ ಕಟ್ಟೀಮನಿಯವರ ಕಾದಂಬರಿಗಳು, ಪ್ರಸಾರಾಂಗ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ, ೨೦೧೯
ದುರ್ಗಾದಾಸ್.ಕೆ.ಆರ್.(ಸಂ), ಬಸವರಾಜ ಕಟ್ಟೀಮನಿಯವರ ಕಾದಂಬರಿಗಳ ಸಮೀಕ್ಷೆ ಸಂಪುಟ ೧, ಪ್ರಸಾರಾಂಗ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ, ೨೦೨೦
ದೇಜಗೌ, ಸಿ.ಪಿ.ಕೆ(ಸಂ), ಕಟ್ಟೀಮನಿ ಬದುಕು-ಬರಹ, ಪ್ರಸಾರಾಂಗ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ, ೨೦೨೩
ರಾಘವೇಂದ್ರ ರಾವ್ ಎಚ್.ಎಸ್., ಪ್ರಗತಿಶೀಲತೆ, ಕರ್ನಾಟಕ ಸಾಹಿತ್ಯ ಆಕಾಡೆಮಿ, ಬೆಂಗಳೂರು, ೨೦೨೧
ಬಸವರಾಜ ಸಾದರ (ಸಂ), ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಗಳು, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ, ೨೦೧೯
ಕೀರ್ತಿನಾಥ ಕುರ್ತಕೋಟಿ, ಯುಗಧರ್ಮ ಹಾಗೂ ಸಾಹಿತ್ಯ ದರ್ಶನ, ಕುರ್ತಕೋಟಿ ಮೇಮೊರಿಯಲ್ ಟ್ರಸ್ಟ್, ಧಾರವಾಡ, ೨೦೧೦
Commentaires