ಪಂಪನ ಕಾವ್ಯಗಳಲ್ಲಿ ಪ್ರಭುತ್ವ
- poorna drishti
- Feb 4
- 6 min read
ವಿಕಾಸ್ ಕುಮಾರ್. ವಿ
ಸಂಶೋಧನಾ ವಿದ್ಯಾರ್ಥಿ, ಕನ್ನಡ ಭಾರತಿ
ಕುವೆಂಪು ವಿಶ್ವವಿದ್ಯಾಲಯ,
೯೧೬೪೩೮೧೮೦೬
ಅಕ್ಷರರೂಪದ ಸಾಹಿತ್ಯಚರಿತ್ರೆಯು ಪಂಪನ ಕಾವ್ಯಗಳಿಂದಲೇ ಮೊದಲ್ಗೊಳ್ಳುತ್ತದೆ. ಕನ್ನಡ ಭಾಷೆಯನ್ನು ಅತ್ಯಂತ ಸಮರ್ಥವಾಗಿ ಮೊದಲು ಉಪಯೋಗಿಸಿದವನೆಂದರೆ ಅದು ಪಂಪ. ಪಂಪನ ‘ಆದಿಪುರಾಣ’ ಮತ್ತು ‘ಪಂಪಭಾರತ’ ಹತ್ತನೆ ಶತಮಾನದಲ್ಲಿ ರಚಿತವಾದ ಮಹತ್ವಪೂರ್ಣ ಕೃತಿಗಳು. ಜೈನಧರ್ಮ ತನ್ನ ಉಚ್ಛಾçಯ ಸ್ಥಿತಿಯಲ್ಲಿದ್ದ ಕಾಲ, ರಾಜಾಶ್ರಯವು ವಿಫುಲವಾಗಿದ್ದ ಕಾಲ. ಪ್ರಬಲ ರಾಜಕೀಯ ಪ್ರಭುತ್ವದ, ಮತ ಸಂಕರವಿದ್ದ ಸಾಮಾಜಿಕ-ಧಾರ್ಮಿಕ ಪರಿಸರದಲ್ಲಿ ಪಂಪನ ಕೃತಿಗಳು ರಚನೆಯಾಗಿವೆ. ಪ್ರಭುತ್ವದ ಜೊತೆಗೆ ತನ್ನ ಬದುಕನ್ನು ಸಾಗಿಸಿದ ಪಂಪ ಪ್ರಭುತ್ವದ ಗುಣಾವಗುಣಗಳನ್ನು ತನ್ನ ಸೀಮಿತ ನೆಲೆಯಲ್ಲಿಯೇ ನಿಂತು ನಿಕಷಕ್ಕೆ ಒಡ್ಡಿದ್ದಾನೆ.
ಪ್ರಭುತ್ವ ಎಂದರೆ ಸಾಮಾನ್ಯವಾಗಿ ಆಡಳಿತಕ್ಕೆ ಒಳಪಟ್ಟ ಪ್ರದೇಶ, ರಾಜ್ಯ, ದೇಶವೆಂದು ರಾಜಕೀಯ ವ್ಯಾಖ್ಯಾನಗಳು ಅರ್ಥೈಸುತ್ತವೆ. ಪ್ರಭುತ್ವವನ್ನು ಅಧಿಕಾರದ ವಿವಿಧ ನೆಲೆಗಳಲ್ಲಿ ಅರ್ಥೈಸಿಕೊಳ್ಳಲಾಗಿದೆ. ಪ್ರಭುತ್ವ ಎನ್ನುವುದನ್ನು Kingship ಎಂಬ ಅರ್ಥದಲ್ಲಿ ಬಳಸಲಾಗಿದೆ. ಆಧುನಿಕ ಪೂರ್ವ ಸಮಾಜದಲ್ಲಿ ಪ್ರಭುತ್ವ ಎಂದರೆ Kingship ಎಂದೇ ಅರ್ಥ. “A king is a supreme ruler, sovereign over a nation or a territory of higher rank than any other secular ruler except an emperor to whom the king may be subject. Kingship is a worldwide phenomenon, can be elective as in Germany but is usually hereditary…..Sometimes the king has been regarding as divine and has become the key figure in fertility rituals”
ಪ್ಲೇಟೋ ರಾಜ್ಯವನ್ನು ಮಾನವನ ಸ್ವಾಭಾವಿಕ ಗುಣಗಳ ತಾರ್ಕಿಕ, ಉತ್ಕೃಷ್ಟ ಅಭಿವ್ಯಕ್ತಿಯೆಂದು ಕರೆದರೆ, ಅರಿಸ್ಟಾಟಲ್ ಪ್ರಭುತ್ವವು ಮಾನವನ ಸ್ವಾಭಾವಿಕ ಅಭಿವ್ಯಕ್ತಿ ಎಂದು ಕರೆದನು. ಬೋಡಿನ್, ಹಾಪ್ಸ್, ಬೆಂಥಮ್ ಮುಂತಾದವರು ರಾಜ್ಯ ಪ್ರಭುತ್ವದ ಶಾಸನೀಯ ದೃಷ್ಟಿಕೋನ ವಿವರಿಸಿದರು. ಥಾಮಸ್ ಹಾಪ್ಸ್, ಜಾನ್‌ಲಾಕ್, ಬೆಂಥಮ್ ಮುಂತಾದವರು ಯಾಂತ್ರಿಕ ದೃಷ್ಟಿಕೋನದಿಂದ ಪ್ರಭುತ್ವವನ್ನು ಅರ್ಥೈಸುತ್ತಾರೆ. ಇಲ್ಲಿ ರಾಜ್ಯವು ಮಾನವನು ತನ್ನ ಅನುಕೂಲತೆಗಾಗಿ ಸೃಷ್ಟಿಸಿಕೊಂಡ ಹಲವಾರು ಯಂತ್ರಗಳಲ್ಲಿ ಒಂದು. ಮೆಕೆವಲ್ಲಿಯಂತಹ ಚಿಂತಕರು ಪ್ರಭುತ್ವವನ್ನು ಚಲಾಯಿಸುವ ಅಧಿಕಾರದ ಹಿನ್ನಲೆಯಲ್ಲಿ ಗುರುತಿಸಿದ್ದಾರೆ. ಮಾರ್ಕ್ಸ್ವಾದಿ ದೃಷ್ಟಿಕೋನವು ಪ್ರಭುತ್ವವನ್ನು ವರ್ಗವ್ಯವಸ್ಥೆಯ ಉತ್ಪನವೆಂದು ಪರಿಗಣಿಸುತ್ತದೆ.
ಅಧಿಕಾರ ಎನ್ನುವುದರ ಬಗ್ಗೆ ರಾಜಕೀಯ ಚಿಂತಕರಾದ ಡೇವಿಡ್ ಈಸ್ಷನ್, ಮಾರ್ಗಂಥೋ, ಮ್ಯಾಕ್ಸ್ ವೆಬರ್ ವಿಭಿನ್ನ ವ್ಯಾಖ್ಯಾನಗಳನ್ನು ನೀಡಿದ್ದರು. ಫ್ರೆಂಚ್ ತತ್ತ÷್ವಜ್ಞಾನಿ ಮಿಶೆಲ್ ಫುಕೋ ಯಾವುದನ್ನು Power ಎಂದು ಕರೆಯುತ್ತಾನೋ ಆ ಅರ್ಥದಲ್ಲಿ ಅಧಿಕಾರ ಎಂಬ ಪರಿಭಾಷೆಯನ್ನು ಬಳಸಲಾಗಿದೆ. ಫುಕೋನ ಪ್ರಕಾರ ಅಧಿಕಾರ ಸರ್ವವ್ಯಾಪಿಯಾದುದು.
ಸಾಹಿತ್ಯದ ಪರಿಭಾಷೆಯಲ್ಲಿ ಪ್ರಭುತ್ವದ ವ್ಯಾಖ್ಯಾನವೇ ಬದಲಾಗುತ್ತದೆ. ಹಲವು ಆಯಾಮಗಳಲ್ಲಿ ತನ್ನ ಅರ್ಥವನ್ನು ವಿಸ್ತರಿಸಿಕೊಳ್ಳುತ್ತವೆ. ಅದರ ಪ್ರಕಾರ ರಾಜಕೀಯ, ಧಾರ್ಮಿಕ, ಸಾಹಿತಿಕ, ಪುರುಷ ಪ್ರಧಾನ, ಆಳ್ವಿಕೆ ಆಧಾರಿತ, ಪುರೋಹಿತಶಾಹಿ, ಸೈನಿಕ ಬಲದ, ಆರ್ಥಿಕ ಪ್ರಭುತ್ವ, ಪ್ರಜಾಪ್ರಭುತ್ವ ಮೌಲ್ಯಗಳ ಬೆಂಬಲಿಸುವ ಆಡಳಿತ ವ್ಯವಸ್ಥೆ ಎನ್ನುವ ನಾನಾ ಸ್ವರೂಪಗಳಲ್ಲಿ ತನ್ನ ನಿಲುವನ್ನು ವಿಸ್ತರಿಸಿಕೊಳ್ಳುತ್ತದೆ. ಇವುಗಳ ಆಶಯಗಳು ಕೂಡ ಅನೇಕ ವೈವಿಧ್ಯತೆಗಳಿಂದ ಕೂಡಿರುತ್ತವೆ.
ಪ್ರಭುತ್ವದ ಚಾರಿತ್ರಿಕ ಬೆಳವಣಿಗೆ: ಪ್ರಭುತ್ವದ ಕಲ್ಪನೆಯು ಯಾವ ಕಾಲದೇಶದಲ್ಲಿ ಉದಯಿಸಿತು ಎನ್ನುವ ವಿಚಾರ ತಿಳಿಯುವುದು ಕಷ್ಟ ಸಾಧ್ಯ. ಇದು ವಿವಿಧ ಕಾಲಘಟ್ಟಗಳಲ್ಲಿ ನಡೆದ ವಿವಿಧ ಬೆಳವಣಿಗೆಗಳ ಒಂದು ಉತ್ಪನ್ನ, ಕುಲ, ಸಂಬAಧ, ಧರ್ಮ, ಉತ್ಪಾದನೆ, ಆರ್ಥಿಕತೆ, ಸಂಪತ್ತು, ರಕ್ಷಣೆ ಮುಂತಾದ ಹಲವಾರು ಅಂಶಗಳು ರಾಜ್ಯ ಹಾಗೂ ಪ್ರಭುತ್ವವನ್ನು ಬೆಳೆಸಿ ಗಟ್ಟಿಗೊಳಿಸುತ್ತಾ ಬಂದಿದೆ.
ಮಾನವನ ವಿಕಾಸ ಹಂತದ ಮೊದಲಲ್ಲಿ ಅವನ ಆಹಾರದ ಮೂಲ ಬೇಟೆಯೇ ಆಗಿತ್ತು. ಕ್ರಮೇಣ ಅಲೆಮಾರಿಯಾದ್ದ ಮನುಷ್ಯ ಒಂದೆಡೆ ನೆಲೆನಿಂತು ಅಲ್ಲಿಯೇ ಆಹಾರವನ್ನು ಬೆಳೆಯಲಾರಂಭಿಸಿದ, ಜೊತೆಗೆ ಪ್ರಾಣಿಗಳನ್ನು ಸಾಕತೊಡಗಿದ. ಇದು ಪಶುಸಂಗೋಪನೆಯಾಗಿ ಮಾರ್ಪಾಟಾಯಿತು, ಕ್ರಮೇಣ ಕೃಷಿಯು ಮಾನವರ ಪ್ರಧಾನ ವೃತ್ತಿಯಾಯಿತು. ಅದುವರೆಗೂ ವಲಸೆ ಮಾಡುತ್ತಾ ತಮ್ಮ ಇಚ್ಛೆ ಬಂದ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದ ಮಾನವ ಒಂದೆಡೆ ನಿಂತು ಭೂಮಿಯನ್ನು ತನ್ನ ಖಾಸಗಿ ಆಸ್ತಿಯನ್ನಾಗಿ ಮಾಡಿಕೊಂಡನು ಭೂಮಿ ಮತ್ತು ಅದರ ಉತ್ಪನ್ನ ಹೇಗೆ ಮಾನವನ ಖಾಸಗಿ ಸ್ವತ್ತಾಯಿತೋ ಹಾಗೇ ಹೆಣ್ಣು ಪುರುಷನ ಸ್ವತ್ತಾದಳು. ಇದರಿಂದ ಸಂಪತ್ತಿನ ಅಧಿಕಾರ ಮತ್ತು ಹೆಣ್ಣಿನ ಮೇಲಿನ ಅಧಿಕಾರ ಪುರುಷನ ವಶವಾದವು. ನಂತರ ಈ ಅಧಿಕಾರ ಹಲವು ವಲಯಗಳಲ್ಲಿ ಹಂಚಿಕೆಯಾಯಿತು.
ಈ ಬುಡಕಟ್ಟುಗಳಲ್ಲಿ ಒಬ್ಬ ನಾಯಕ ಅಥವಾ ನಾಯಕರ ತಂಡವು ಈ ಗುಂಪಿನಲ್ಲಿ ಒಪ್ಪಿತವಾದ ಸಂಪ್ರದಾಯಗಳನ್ನು ಜಾರಿಗೊಳಿಸುವ ಅಧಿಕಾರ ಹೊಂದಿದ್ದ ಕಾಲಘಟ್ಟವಿತ್ತು. ಈ ಬಗೆಯ ಅಧಿಕಾರ ಹೊಂದಿರುವ ಸ್ಥಿತಿಯನ್ನು ಪ್ರಭುತ್ವದ ಪ್ರಥಮ ಹಂತವೆAದು ತಿಳಿಯಲಾಗಿದೆ. ಪ್ರಭುತ್ವವು ಪ್ರಾರಂಭದ ಹಂತದಲ್ಲಿ ಗುಂಪಿನ ಸಮಸ್ತ ಸದಸ್ಯರ ಆಯ್ಕೆಯಾಗಿತ್ತು ನಿಧಾನವಾಗಿ ವಂಶಪಾರAಪರಿಕವಾಗಿ ಬದಲಾಗ ತೊಡಗಿತು. ಕೃಷಿ ಸಂಸ್ಕೃತಿಯ ಉದಯದೊಂದಿಗೆ ಪ್ರಭುತ್ವ ಒಂದು ಭೌಗೋಳಿಕ ಕ್ಷೇತ್ರದೊಂದಿಗೆ ತನ್ನನ್ನು ಗುರುತಿಸಿಕೊಂಡಿತು. ಹಾಗಾಗಿ ಇತಿಹಾಸದಲ್ಲಿ ಪ್ರಥಮ ಪ್ರಭುತ್ವ ರಾಜ್ಯಗಳು ಫಲವತ್ತಾದ ನೈಲ್, ಯೂಫ್ರೆಟಿಸ್, ಟ್ರೆöÊಗ್ರಿಸ್, ಸಿಂಧೂ ಗಂಗಾ ನದಿಗಳ ತಟದಲ್ಲಿ ಉದಯವಾದವು.
ಪ್ರಭುತ್ವದ ಉಗಮವು ಭಾರತದಲ್ಲಿ ಐದುಸಾವಿರ ವರ್ಷಗಳ ಹಿಂದೆ ಸಿಂಧೂಕಣಿವೆಯಲ್ಲಿ ಆಗಿತ್ತು. ಆರಂಭಿಕ ಹಂತದಲ್ಲಿ ಪ್ರಭುತ್ವ ಮನುಷ್ಯನ ಸಹಕಾರಿ, ಸಹಬಾಳ್ವೆಯ ಸಾಧನವಾಗಿಯೇ ಮನುಷ್ಯ ಆರಂಭಿಕ ಪ್ರಭುತ್ವಗಳ ಜೊತೆಜೊತೆಯಲ್ಲಿಯೇ ಬುಡಕಟ್ಟು ಜೀವನ ಮುಂದುವರೆದಿತ್ತು ಅದು ಭಾರತೀಯ ಇತಿಹಾಸದುದ್ದಕ್ಕೂ ಮತ್ತು ಈಗಲೂ ಇದೆ. ಅಂದರೆ ಕೆಲವು ಪ್ರದೇಶಗಳಲ್ಲಿ ಸಾಮುದಾಯಿಕ ಕಲ್ಪನೆಯನ್ನು ತಾನಾಗಿಯೇ ವಿಘಟಿಸಿ ಅಥವಾ ಒಳಗಾಗದೇ ಉಳಿದಿರುವಲ್ಲಿಯೂ ಪ್ರಭುತ್ವ ಅಸ್ತಿತ್ವದಲಿರುತ್ತದೆ. ತಾನು ಬಯಸುವಂAತಹ ಸಾಮಾಜಿಕ ಚೌಕಟ್ಟನ್ನು ನಿರ್ಮಿಸುವಲ್ಲಿಯೂ ಶ್ರಮವಹಿಸುತ್ತದೆ ಬಲಪ್ರಯೋಗದ ಭಾಗವಾಗಿ ಯುದ್ಧವನ್ನು ಇಂತಹ ಸಮಯಗಳಲ್ಲಿಯೇ ಪ್ರಭುತ್ವ ಕಂಡುಕೊAಡಿದೆ.
ಪAಪನ ಕಾಲ ‘ರಾಜಾ ಪ್ರತ್ಯಕ್ಷ ದೇವತಾ’ ಅಥವಾ ‘ನಾ ವಿಷ್ಣುಃ ಪೃಥ್ವಿವೀ ಪತಿಃ’ ಎಂಬ ಅಚಲವಾದ ನಂಬಿಕೆಯನ್ನು ಹೊತ್ತಂತಹ ಕಾಲ. ಜನಸಾಮಾನ್ಯರಲ್ಲಿಯೂ ಇದೇ ನಂಬಿಕೆ ಇತ್ತು. ಇದಕ್ಕೆ ಧಾರೆ ಎರದು ಬೆಳೆಸಿದವರು ಕನ್ನಡದ ಆರಂಭಿಕ ಕವಿಗಳಾದ ಜೈನ ಕವಿಗಳಿಗೆೆÃ ಮೊದಲಾಗಿ ಪಂಪನೆ ‘ಆಶ್ರಯದಾತ-ಕಥಾನಾಯಕ ಸಮೀಕರಣ’ದ ಆದರ್ಶವನ್ನು ಒದಗಿಸಿದವನು.
‘ರಾಜ ದೈವತ್ವ’ದ ನಂಬಿಕೆ ವೈಯಕ್ತಿಕವಾಗಿ ಪಂಪನಲ್ಲಿಯೂ ತುಂಬಿಕೊAಡಿತ್ತು. ಪಂಪ ಬಾಳಿದ ಕಾಲದ ವಾತಾವರಣವೇ ಹಾಗಿತ್ತು, ಒಂದೆಡೆ ಜೈನ ಧರ್ಮದ ಪರಂಪರೆಯಲ್ಲಿಯೇ ಇದ್ದ ರಾಜತ್ವದ ಬಗೆಗಿನ ಅನನ್ಯ ಗೌರವ ಮತ್ತೊಂದೆಡೆ ತನ್ನ ಕಾಲದ ರಾಜಭಕ್ತಿ ಇವುಗಳು ಪಂಪನ ವ್ಯಕ್ತಿತ್ವದ ಭಾಗವಾಗಿ ತನ್ನ ಕಾವ್ಯದಲ್ಲಿ ಅವನು ರಾಜತ್ವಕ್ಕೆ ಅಪಾರ ಗೌರವ ತೋರಿಸಲು ಕಾರಣವಾಗಿದೆ.
ಪ್ರಭುತ್ವದ ಪ್ರಭಾವಕ್ಕೆ ಒಳಗಾದ ಪಂಪನು ಬೆಳಗಿದ ‘ಜಿನಾಗಮ’ ಹಾಗೂ ‘ಲೌಕಿಕ’ ಎರಡರಲ್ಲಿಯೂ ರಾಜತ್ವ ವಿಜೃಂಭಿಸುವAತೆ ಮಾಡಿದ್ದಾನೆ. ಅವನ ಎರಡೂ ಕಾವ್ಯಗಳು ಸಹ ರಾಜರನ್ನು ಕುರಿತವೇ, ಅವನ ಕಾವ್ಯಗಳಲ್ಲಿ ಪ್ರಭುತ್ವದ ವೈಭವವನ್ನು ನಾವು ನೋಡಬಹುದು. ಮೊದಲ ಕಾವ್ಯವಾದ ಆದಿಪುರಾಣವು ಮೊದಲನೆಯ ತೀರ್ಥಂಕರನ ಚರಿತೆ. ಜೈನ ಪರಂಪರೆಯ ಪ್ರಕಾರ ಎಲ್ಲ ತೀರ್ಥಂಕರರೂ ರಾಜರುಗಳೇ ಮೊದಲನೆಯ ತೀರ್ಥಂಕರನು ಇದಕ್ಕೆ ಹೊರತಲ್ಲ ಭವಾವಳಿಯಲ್ಲಿ ಚಿತ್ರಿತವಾಗಿರುವ ಹಿಂದಿನ ಜನ್ಮಗಳೆಲ್ಲದರಲ್ಲಿಯೂ ಅವನು ರಾಜನಾಗಿದ್ದನು.
ಆದಿಪುರಾಣ ಆದಿನಾಥನ ವೈರಾಗ್ಯದ ಕಡೆಗಿನ ಕಥೆಯಾದರೂ ಅದು ಆರಂಭಗೊಳ್ಳುವುದೇ ಪ್ರಭುತ್ವದ ಲಾಲಸೆಯೊಂದಿಗೆ, ಸ್ವತಃ ಆದಿನಾಥನೆ ತನ್ನ ಮೊದಲ ಜಯವರ್ಮ ಭವದಲ್ಲಿ ಸಿಂಹಪುರದಲ್ಲಿ ಶ್ರೀಷೇಣ ಮತ್ತು ಸುಂದರಿಯರೆAಬ ರಾಜದಂಪತಿಗೆ ಮೊದಲ ಮಗನಾಗಿ ಜನಿಸಿರುತ್ತಾನೆ. ಅವನನ್ನು ಅನುಲಕ್ಷಿಸಿ ಆತನ ತಮ್ಮನಿಗೆ ಪಟ್ಟಕಟ್ಟಲಾಗುತ್ತದೆ ಅದಕ್ಕೆ ಬೇಸರಗೊಂಡು ಮುಂದಿನ ಜನ್ಮದಲ್ಲಾದರೂ ದೊರೆಯಾಗಬೇಕೆಂದು ಬಯಸಿ ಸ್ವಯಂಪ್ರಭ ಮುನಿಗಳಲ್ಲಿ ಜಿನದೀಕ್ಷೆ ತೆಗೆದುಕೊಂಡನು.
ತೀಥAðಕರನ ಕಾಲಕ್ಕೆ ಇದ್ದದ್ದು ಮೂರೇ ವರ್ಣಗಳು ಕ್ಷತ್ರಿಯ, ವೈಶ್ಯ, ಶೂದ್ರ ಇದರಲ್ಲಿ ಕ್ಷತ್ರಿಯನೇ ಶ್ರೇಷ್ಠ. ಹಾಗಾಗಿ ತೀರ್ಥಂಕರರೆಲ್ಲರೂ ಕ್ಷತ್ರಿಯರು ಆದಿದೇವನಿಗೂ ಮುಂಚೆ ಈ ತ್ರಿವರ್ಣಗಳಲ್ಲಿ ಕರ್ತವ್ಯಗಳ ಹಾಗೂ ಕೊಡು-ಕೊಡುಗೆಗಳ ವಿಷಯದಲ್ಲಿ ಗೊಂದಲವಿತ್ತೆÉAದು ಕಾಣುತ್ತದೆ ಹಾಗಾಗಿ ಪುರುದೇವನು ಈ ಮೂರು ವರ್ಣಗಳವರಿಗೆ ನಿರ್ದಿಷ್ಟ ಕೆಲಸವನ್ನು ನಿಯಮಿಸಿದನು. “ವರ್ಣಸಂಕರಮಾಗಲೀಯದೆ ತಮ್ಮ ತಮ್ಮ ಜಾತಿಗಳೊಳ್ ನಣ್ಪುಮಂ ಕೊಳ್ಕೊಡೆಯುಮಂ ನಿಯೋಜಿಸಿ”ದನಂತೆ. ನಂತರದಲ್ಲಿ ‘ಫಳಕುಸುಮ ಪ್ರವಾಳಹರಿತಾಂಕುರ ರಾಜಿಯೊಳಲ್ಲಿ ಜೀವಸಂಕುಳಮಳವಲ್ಲದುAಟು’ಎAಬ ಪ್ರಜ್ಞೆಯನ್ನು ತೋರಿದವರನ್ನು ಬ್ರಾಹ್ಮಣನೆಂದು ಭರತ ಗುರುತಿಸಿದ.
ಧರೆಯೊಳ್ ಧರ್ಮಾರ್ಥದಿಂ ನೀಂ ಸೃಜಿಯಿಸಿ ನೆಗೞ್ದೀ ವಿಪ್ರಸಂತಾನದೊAದಾ
ಚರಣA ನೀನೆಂದ ಪಾಂಗಿ ಕೃತಯುಗದೊಳೆ ದಲ್ ಸಲ್ಗುನಿನ್ನತ್ತ ನಷ್ಟಾ
ಚರಣಂ ಸನ್ಮಾರ್ಗದೊಳ್ ಮಚ್ಚರಿಸಿ ಕಲಿಯುಗಾಭ್ಯರಣ್ಯದೊಳ್ ದ್ರವ್ಯಲೋಭಾ
ತುರರುನ್ಮಾರ್ಗೋಪದೇಶೋದ್ಯತ ಮತಿಗಳತಿ ಕ್ರೂರಪ್ಪರ್ ದ್ವಿಜನ್ಮರ್|| ಆ.ಪು. ೧೫. ೨೬
ಎಂದು ತೀರ್ಥಂಕರ ಭವಿಷ್ಯ ನುಡಿದ. ಹೀಗಾಗಿ ವರ್ಣಗಳಲ್ಲೆಲ್ಲ ಕ್ಷತ್ರಿಯವೇ ಶ್ರೇಷ್ಠ ಎಂಬುದು ಜೈನ ಸಮಾಜದ ಅಂಶವಾಗಿದೆ. ಜೈನರಲ್ಲಿ ವರ್ಣಗಳಲೆಲ್ಲ ಕ್ಷತ್ರಿಯವೇ ಶ್ರೇಷ್ಠ ಆದು ಎಂದೂ ಕೆಡದು ಎಂಬ ವಿಶ್ವಾಸ ಇದೆ. ವರ್ಣಸಂಕರವಾಗಲು ಬಿಡದೇ ವರ್ಣವ್ಯವಸ್ಥೆಯನ್ನು ಯಥಾರೂಪದಲ್ಲಿ ಮುಂದುವರೆಸುವ ಪ್ರಯತ್ನ ಜೈನ ಸಮಾಜದಲ್ಲಿ ನಡೆದಿದ್ದು ಪಂಪನು ಅದನ್ನು ದಾಖಲಿಸಿದ್ದಾನೆ. ಜೈನರಲ್ಲಿ ದೇವರು ದೈವತ್ವದ ಪರಿಕಲ್ಪನೆ ಇಲ್ಲ ಆದರೆ ಅವರಲ್ಲಿ ರಾಜರಲ್ಲಿ ತೀರ್ಥಂಕರ ಅಂಶವಿದೆ ಎಂಬ ಭಾವನೆ ಇದೆ.
ಪಂಪನ ಮತ್ತೊಂದು ಕಾವ್ಯ ವಿಕ್ರಮಾರ್ಜುನ ವಿಜಯ, ತನ್ನ ಕಾವ್ಯಕ್ಕೆ ಕೊಟ್ಟ ಶೀರ್ಷಿಕೆಯೇ ವಿಕ್ರಮಾರ್ಜುನ ವಿಜಯ ಇದರಲ್ಲೇ ಪ್ರಭುತ್ವದ ನಿಲುವು ಕಾಣುತ್ತದೆ. ವಿಕ್ರಮಾರ್ಜುನ ವಿಜಯ ಪ್ರಜ್ಞಾಪೂರ್ವಕವಾಗಿ ರಾಜತ್ವದ ವೈಭವೀಕರಣ ಮತ್ತು ‘ವೀರಭೋಜ್ಯಾವಸುಂಧರಾ’ ಎಂಬ ರಾಜರ ಆದರ್ಶ ನಿರೂಪಣೆಗೆ ಮೀಸಲಾಗಿದೆ. ‘ವೀರಯುಗ’ ಎನಿಸಿಕೊಳ್ಳಲು ಆಗಿನ ಸಾಮ್ರಾಜ್ಯಶಾಹಿ ಆಕಾಂಕ್ಷೆಗೆ ಸಾಧನವಾದ ಯುದ್ಧದ ಬಗೆಗಿನ ಮನೋಭಾವ ಇವುಗಳ ಕುರಿತಾದ ಮಾಹಿತಿಯೇ ತುಂಬಿದೆ.
ವಿಕ್ರಮಾರ್ಜುನ ವಿಜಯದ ಆರಂಭದ ಪದ್ಯಗಳನ್ನು ಗಮನಿಸುವುದಾರೆಪ್ರಾರ್ಥನಾ ಪದ್ಯದಲ್ಲಿ ಕ್ರಮವಾಗಿ ನಾರಾಯಣ, ಮಹೇಶ್ವರ, ಮಾರ್ತಾಂಡ ಹಾಗೂ ಮನೋಜರನ್ನು ಸ್ತುತಿಸಿ ಅವರಿಂದಲೇ ಅರಿಕೇಸರಿಯ ಸ್ತುತಿಯನ್ನು ಮಾಡಿಸಿದ್ದಾನೆ ಅಲ್ಲದೇ ಅವರೆಲ್ಲರಿಗಿಂತಲೂ ಅರಿಕೇಸರಿಯೇ ಮಿಗಿಲು ಎಂಬAತೆ ವರ್ಣಿಸಿದ್ದಾನೆ. ಈ ಪದ್ಯಗಳಲ್ಲಿ ನಡೆದಿರುವುದು ದೇವತೆಗಳ ಸ್ತುತಿಯಲ್ಲ ಅರಿಕೇಸರಿಯ ಸ್ತುತಿ.
ಮೊದಲ ಪದ್ಯದಲ್ಲಿ ನಾರಾಯಣನಿಗಿಂತ ಮಿಗಿಲಾದ “ಉದಾತ್ತ ನಾರಾಯಣನಾದ ದೇವನೆಮಗೀಗರಿಕೇಸರಿ ಸೌಖ್ಯಕೋಟಿಯಂ” ಎಂದೂ; ಎರಡನೆಯದರಲ್ಲಿ “ಉದಾರ ಮಹೇಶ್ವರನೀಗೆ ಭೋಗಮಂ” ಎಂದೂ; ಮೂರನೆಯದರರಲ್ಲಿ “ಪ್ರಚಂಡ ಮಾರ್ತಾಂಡನಲರ್ಚುಗೆನ್ನ ಹೃದಯಾಂಬುಜಮA ನಿಜ ವಾಙ್ಮರೀಚಿಯಿಂ” ಎಂದೂ; ನಾಲ್ಕನೆಯದರಲ್ಲಿ “ ಸಹಜಮನೋಜನೆಮಗೀಗೆ ವಿಚಿತ್ರ ರತೋತ್ಸವಂಗಳA” ಎಂದು ಪಂಪ ಪ್ರಾರ್ಥಿಸಿದ್ದಾನೆ. ದೇವರು ನಾರಯಣನಾದರೆ ತನ್ನ ಒಡೆಯ ‘ಉದಾತ್ತ ನಾರಾಯಣ’; ದೇವರು ಮಹೇಶ್ವರನಾದರೆ, ತನ್ನ ಪ್ರಭು ‘ಉದಾರ ಮಹೇಶ್ವರ’; ದೇವರು ಚಂಡವಿರೋಧಿಯಾದರೆ ತನ್ನ ಯಜಮಾನ ‘ಪ್ರಚಂಡ ಮಾರ್ತಾಂಡ’; ಹಾಗೆ ಆತ ಮನೋಜನಾದರೆ ಅರಿಕೇಸರಿ ‘ಸಹಜಮನೋಜ’ ಎಂದು ದೇವರಿಗಿಂತಲೂ ತನ್ನ ಆಶ್ರಯದಾತನೇ ಮಿಗಿಲು ಎಂದು ರಾಜನನ್ನು ದೈವತ್ವಕ್ಕಿಂತ ಮಿಗಿಲಾಗಿ ರೂಪಿಸುವ ಮನೋಧರ್ಮ ಪಂಪನಲ್ಲಿದೆ.
ಪAಪ ತನ್ನ ಕೃತಿಯಲ್ಲಿ ಹೇಳುತ್ತಿರುವ ಮೌಲ್ಯಗಳೂ ಸಹ ಪ್ರಭುತ್ವದಲ್ಲಿ ಕಾಣುವ ಮೌಲ್ಯಗಳೇ ಆಗಿವೆ
ಚಲದೊಳ್ ದುರ್ಯೋಧನಂ ನನ್ನಿಯೊಳಿನತನಯಂ ಗಂಡಿನೊಳ್ ಭೀಮಸೇನಂ
ಬಲದೊಳ್ ಮದ್ರೇಶನತ್ಯುನ್ನತಿಯೊಳಮರಸಿಂಧೂದ್ಭವA ಚಾಪವಿದ್ಯಾ
ಬಲದೊಳ್ ಕುಂಭೋದ್ಭವA ಸಾಹಸದ ಮಹಿಮೆಯೊಳ್ ಫಲ್ಗುಣಂ ಧರ್ಮದೊಳ್ ನಿ
ರ್ಮಲ ಚಿತ್ತಂ ಧರ್ಮಪುತ್ರಂ ಮಿಗಿಲಿವರ್ಗಳಿನೀ ಭಾರತಂ ಲೋಕಪೂಜ್ಯಂ||
ಲೋಕಪೂಜ್ಯ ಮಾಡಿರುವ ಪಾತ್ರಗಳು ಇವು. ಒಂದೊAದು ಗುಣದ ಪ್ರತೀಕಗಳಾಗಿವೆ ಛಲ, ನನ್ನಿ, ಗಂಡು, ಬಲ, ಅತ್ಯುನ್ನತಿ, ಚಾಪ ವಿದ್ಯಾಬಲ, ಸಾಹಸ, ನಿರ್ಮಲ ಚಿತ್ತ ಇವುಗಳನ್ನು ಪ್ರತಿನಿಧಿಸುವ ಪಾತ್ರಗಳೇ ಕೊನೆಯವರೆಗೂ ಆ ಮೌಲ್ಯಗಳಾಗಿ ಬದುಕಿದವು ಎಲ್ಲರೂ ತಮ್ಮ ವಿಶಿಷ್ಟ ಗುಣಗಳನ್ನು ಮೆರೆದದ್ದು ಯುದ್ಧ ಭೂಮಿಯಲ್ಲಿಯೇ ಹಾಗಾಗಿ ಈ ಎಲ್ಲ ಪಾತ್ರಗಳ ಓರೆಗಲ್ಲು ಉಳಿದಂತೆ ಬದುಕಿನ ಬಗೆಯಲ್ಲ ಲೋಕ ಪೂಜ್ಯವಾಗುವ ಗುಣಗಳೆಲ್ಲವೂ ಯುದ್ಧ ಸಂಬAಧಿ ಗುಣಗಳು, ರಾಜರ ಪರವಾದ ಮೌಲ್ಯಗಳು ಪಂಪ ಈ ಮೌಲ್ಯಗಳಿಂದ ಬದುಕು ಮೌಲಿಕವಾಗುತ್ತದೆ ಎಂದು ಅದರಿಂದ ಲೋಕ ಪೂಜಿತವಾಗುತ್ತದೆ ಎಂದು ಧನಿಸುತ್ತಿದ್ದಾನೆ.
ಕಾವ್ಯದಲ್ಲಿಯೂ ಸಹ ಪಂಪ ಇಂತಹ ಗುಣಗಳು ರಾಜತ್ವದ ಸಂಕೇತವೆAಬAತೆ ಚಿತ್ರಿಸಿದ್ದಾನೆ. ಸಾಮಾನ್ಯವರ್ಗದ ಪ್ರತಿನಿಧಿಯಾದ ಕರ್ಣನನ್ನೇ ಪಂಪ ಈ ರಾಜತ್ವದ ಪ್ರತೀಕಗಳಿಗೆ ಒಳಗುಮಾಡಿರುವುದು ಆಶ್ಚರ್ಯಕರ ಸಂಗತಿಯಾಗಿದೆ.
ಕುAತಿಯು ಕರ್ಣನನ್ನು ಭೇಟಿಮಾಡಿ ಮಗನೆಂದು ಕರೆದ ಸಂದರ್ಭದ ಮಾತು ಹೀಗಿದೆ.
ಚಲಮುಂ ಚಾಗಮುಮಳವುಂ
ಕಲಿತನಮುA ಕುಲಮುಮೀಗಳೆನ್ನಯ ಮೆಯ್ಯೊಳ್
ನೆಲಸಿದುವು ನಿಮ್ಮ ಕರುಣಾ
ಬಲದಿಂ ನೀವೆನ್ನನಿಂದು ಮಗನೆಂದುದಱಿA|| ವಿ.ವಿ.೯-೮೦
ಪಂಪ ತನ್ನ ಕಾಲದ ರಾಜರ ಆದರ್ಶರೂಪವನ್ನು ಸಹ ನೀಡಿದ್ದಾನೆ.
ಒತ್ತಿತಱುಂಬಿ ನಿಂದ ರಿಪು ಭೂಜನಸಮಾಜದ ಬೇರ್ಗಳಂ ನಭ
ಕ್ಕೆತ್ತದೆ ಬಂದು ತನ್ನ ಮಱೆವೊಕ್ಕೊಡೆ ಕಾಯದೆ ಚಾಗದೂಳ್ಪಿನ
ಚ್ಚೊತ್ತದೆ ಮಾಣ್ದು ಬಾ¿್ವಪುೞಿವಾನಸನೆಂಬಜಾAಡಮೆAಬುದೊA
ದತ್ತಿಯ ಪಣ್ಣೊಳಿರ್ಪ ಪುೞುವಲ್ಲದೆ ಮಾನಸನೇ ಮುರಾಂತಕ|| ವಿ.ವಿ. ೫.೭೫
ಶತ್ರುಗಳ ಬೇರುಕಿತ್ತು, ಮೊರೆಹೊಕ್ಕವರನ್ನು ರಕ್ಷಿಸಿ, ತ್ಯಾಗಕ್ಕೆ ನೆಲೆಯಾಗದವನ ಬಾಳು ಅತ್ತಿಯ ಹಣ್ಣಿನಲ್ಲಿರುವ ಹುಳುಎಂದು ರಾಜನ ಗುಣಲಕ್ಷಣ ಹೇಗಿರಬೇಕೆಂದು ಕೇಳಿದ್ದಾನೆ.
ಹತ್ತನೆ ಶತಮಾನದ ಅಗತ್ಯತೆ ಹಾಗೂ ಅಂದಿನ ಮೌಲ್ಯವಾಗಿದ್ದ ಯುದ್ಧಕ್ಕೆ ಸೈನಿಕರನ್ನು ಸದಾ ಸಿದ್ದ ಪಡಿಸುವುದು ಪ್ರಭುತ್ವ ಅತಿ ಅಗತ್ಯತೆಗಳಲ್ಲಿ ಒಂದಾಗಿತ್ತು “ಮಾನಸರೇನಿನ್ನೂರು ವರ್ಷಮಂ ಬಳ್ದಪರೇ” ಎಂದು ಮನುಷ್ಯ ಎಂದಿದ್ದರೂ ಸಾಯಲೇಬೇಕು ಆದ್ದರಿಂದ “ಒಡಲುಂ ಪ್ರಾಣಮೆಂಬಿವು ಕಿಡಲಾದವು ಜಸಮೊಂದೆ ಕಿಡದು” ಎಂಬ ಆವೇಶವನ್ನು ಅವರಿಗೆ ತುಂಬುವ ಅದಕ್ಕಿಂತಲೂ ಮಿಗಿಲಾಗಿ “ನಾಳೆ ಪೋಗಿ ದಿವಿಜಾಂಗನೆಯರಲ್ಲಿ ಸೇರುವುದು” ಈ ರೀತಿಯ ಕಲ್ಪನೆಗಳ ಮೂಲಕ ಜನರನ್ನು ಯುದ್ಧದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ವ್ಯವಸ್ಥೆಯೂ ಪ್ರಭುತ್ವದಿಂದಲೇ ಪ್ರೇರೇಪಿತವಾಗಿತ್ತು.
‘ಜಿತೇನ ಲಭ್ಯತೇ ಲಕ್ಷಿö್ಮÃ’ ಎಂಬುದನ್ನು ಕವಿಗಳು ತಮ್ಮ ಕಾವ್ಯದಲಿ ವೈಭವಿಕರಿಸಿದ್ದರು ಪಂಪನು ಕೂಡ ಇದಕ್ಕೆ ಹೊರತಲ್ಲ ತನ್ನ ಕಾವ್ಯದಲ್ಲಿ ಅರ್ಧದಷ್ಟು ಯುದ್ಧದ ವರ್ಣನೆಗಳನ್ನು ಮಾಡಿದ್ದಾನೆ. “ರಣದೊಳ್ ಗೆಲ್ದಾಜಿಯಂ ತಳ್ತು ಸಂಗರದೊಳ್ ಜೋಳದ ಪಾೞಿಯಂ ನೆರಪಿದಂ ಗಂಡA ಪೆ¾ಂ ಗಂಡನೆ”- ಜೋಳದ ಪಾಳಿಯನ್ನು ತೀರಿಸಿದವನೇ ಶೂರ, ಬೇರೆಯವರು ಶೂರರಲ್ಲ ಎಂಬ ನಂಬಿಕೆ ಪಂಪನ ಕಾಲದಲ್ಲಿ ಬಹಳ ಗೌರವ ಪಡೆದಿತ್ತು.
ಪ್ರಭುತ್ವದ ಅಂಕೆಗೆ ಸ್ವತಃ ಪಂಪನೇ ಒಳಗಾಗಿದ್ದು ಅದನ್ನು ಹೀಗೆ ವಿವರಿಸಿದ್ದಾನೆ.
ಕವಿತೆ ನೆಗೞ್ತೆಯಂ ನಿಱಿಸೆ ಜೋಳದ ಪಾೞಿ ನಿಜಾಧಿನಾಥನಾ
ಹವದೊಳರಾತಿನಾಯಕರ ಪಟ್ಟನೆ ಪಾಱಿಸೆ ಸಂದ ಪೆಂಪು ಭೂ
ಭುವನದೊಳಾಗಳುಂ ಬೆಳÉಗೆ ಮಿಕ್ಕಭಿಮಾನದ ಮಾತು ಕೀರ್ತಿಯಂ
ವಿವರಿಸೆ ಸಂದನೇA ಕಲಿಯೋ ಸತ್ಕವಿಯೋ ಕವಿತಾಗುಣಾರ್ಣವಂ|| ವಿ.ವಿ. ೧೪.೫೦
ಈ ಪದ್ಯದಲ್ಲಿ ಪಂಪ ತನ್ನ ಕಾವ್ಯದ ಯಶಸ್ಸು, ತನ್ನ ಯಶಸ್ಸು ತನ್ನ ಆಶ್ರಯದಾತನ ಅನ್ನದ ಋಣದಿಂದಲೇ ಸಾಧಿತವಾಯಿತೆಂದು ಹೇಳಿರುವಲ್ಲಿ ಪ್ರತಿಭೆಗೂ ಇರುವ ಪ್ರಭುತ್ವದ ಅವಶ್ಯಕತೆಯನ್ನು ಪಂಪ ಒಪ್ಪಿಕೊಂಡಿದ್ದಾನೆ. ಪAಪ ನಮಗೆ ಮುಖ್ಯವಾಗುವುದು ಆತ ಪ್ರತಿಪಾದಿಸಿದ ಪ್ರಭುತ್ವದ ಪರವಾದ ನಿಲುವುಗಳಿಂದ ಅಲ್ಲ ಪ್ರಭುತ್ವ ಜೊತೆಗಿದ್ದುಕೊಂಡೆ ಅದಕ್ಕೆ ಆತ ಒಟ್ಟಿದ ಪ್ರತಿರೋಧದಿಂದ. ಅವನ ಎರಡೂ ಕಾವ್ಯಗಳೂ ರಾಜತ್ವವನ್ನು ಪ್ರತಿಪಾದಿಸಿದ್ದರೂ ಅದರ ಒಡಲೊಳಗೆ ಅದನ್ನು ನಯವಾಗಿ ಧಿಕ್ಕರಿಸುವ ಮನೋಧರ್ಮ ಪಂಪನದ್ದು. “ರಾಜನ ಬಗೆಗಿನ ವ್ಯಾಪಾರ ಭಕ್ತಿ ಜಾಗೃತನೆಲೆಯಲ್ಲಿ ಪಂಪನನ್ನು ಆವರಿಸಿದ್ದರೂ ಒಳಗಿನ ಮಾನವೀಯ ಪಾತಾಳಿಯ ಅನುಕಂಪ ಅವನಲಿ ಸಾತ್ತಿ÷್ವಕ ಕ್ರೋಧವನ್ನು ಉಂಟುಮಾಡುವAತಾಗುತ್ತದೆ.”
ಬಾಹುಬಲಿಯು ಚಕ್ರಾಧಿಪತಿಯಾಗುವ ಅವಕಾಶವನ್ನು ನಿರಾಕರಿಸುತ್ತಾನೆ. ಅಲ್ಲಿಯ ವರೆಗೂ ಆತನಲ್ಲಿದ್ದ ಭಾವವು ಮಾಯವಾಗಿ ರಾಜ್ಯಾಧಿಕಾರದ ಬಗ್ಗೆ ವಿರಕ್ತಿ ಉಂಟಾಗಿ “ಸೋದರರೊಳ್ ಸೋದದರಮ ಕಾದಿಸುವುದು ಸುತನಂ ತಂದೆಯೊಳ್ ಬಿಡದುತ್ಪಾದಿಸುವುದು ಕೋಪಮನ್” ಎನ್ನುತ್ತಾನೆ. ಪಂಪನ ಕಾಲದ ಕನ್ನಡ ನಾಡು ತೀವ್ರ ತಲ್ಲಣಗಳನ್ನು ಅನುಭವಿಸುತ್ತಿತ್ತು. ಜಾತಿ ಮತ್ತು ಯುದ್ಧ ಈವೆರಡನ್ನು ವಿಕ್ರಮಾರ್ಜುನ ವಿಜಯ ತನ್ನ ಒಡಲಲ್ಲಿ ಹುದುಗಿಸಿಕೊಂಡಿದೆ. ಶಲ್ಯನ ‘ಪೊದಳ್ದು ಪರ್ವಿದವಿವೇಕತೆಯಿಂ ನೃಪಚಿತ್ತವೃತ್ತಿ ಸಂಚಲA ಅದಱಿಂದಮೋಲಗಿಸಿ ಬಾಳ್ವುದೆ ಕಷ್ಟಮಿಳಾಧಿನಾಥರಂ’ ಎಂಬ ಶಲ್ಯನ ಮಾತುಗಳು ಜನತೆಯು ರಾಜತ್ವದ ಬಗ್ಗೆ ಹೊಂದಿದ ಆಕ್ರೋಶವೇ ಆಗಿದೆ. ಅಶ್ವತ್ಥಾಮನು ಹೇಳುವ ‘ನಿಜದೊಳೆ ಭೂಪರೆಂಬರವಿವೇಕಿಗಳಪ್ಪರ್’ ಎಂಬ ಮಾತು ರಾಜರ ಅವಿವೇಕ ಅಧಿಕಾರ ದ್ರಾಷ್ಟö್ಯತೆಯ ಕುರಿತ ಮಾತುಗಳೇ ಆಗಿವೆ.
ವಿಕ್ರಮಾರ್ಜುನ ವಿಜಯದಲ್ಲಿ ಕರ್ಣ ದುರ್ಯೋಧನರು ಹೊಸ ಹುಟ್ಟನ್ನ ಪಡೆದಿರುವುದನ್ನು ಗಮನಿಸಿದರೆ ಈ ಕುರಿತ ಹೊಸಚಿಂತನೆ ಪಂಪನಿAದಲೇ ಮೊದಲು ಸಾಧ್ಯವಾಯಿತು, ಪಂಪನೇ ಮಹಾಭಾರತದ ಮೊದಲ ಕನ್ನಡದ ವಿಮರ್ಶಕ.
ಪಂಪ ತನ್ನ ಕಾವ್ಯದಲ್ಲಿ ತಂದಿರುವ ನಾಯಕ-ಪ್ರತಿನಾಯಕ ಕಲ್ಪನೆಯು ಪ್ರಭುತ್ವಕ್ಕೆ ಪರೋಕ್ಷವಾದ ನಿಲುವೇ ಆಗಿದೆ. ಕೇವಲ ನಾಯಕ ಮಾತ್ರ ಉದಾತ್ತ ಗುಣಗಳನ್ನು ಹೊಂದಿರುವುದಿಲ್ಲ ಆತನಿಗಿಂತಲೂ ಶ್ರೇಷ್ಠ ವ್ಯಕ್ತಿತ್ವ ಉಳ್ಳ ಪಾತ್ರಗಳು ಕಾವ್ಯದಲ್ಲಿ ಇರುತ್ತವೆ ಎಂಬುದು ನಾಯಕನೇ ಸರ್ವಶ್ರೇಷ್ಠ ಎಂಬ ಪರಿಕಲ್ಪನೆಗೆ ಪ್ರತಿರೋಧದ ಅಂಶವಾಗಿದೆ. ಸ್ವತಃ ಪಂಪನೇ ತನ್ನ ಆಶ್ರಯದಾತನನ್ನು ನಾಯಕನನ್ನಾಗಿ ಮಾಡಿ, ಆತನ ವಿಜಯವನ್ನೇ ಮುಖ್ಯವಾಗಿ ಹೇಳಲು ನಿಶ್ಚಯಿಸಿದ್ದರೂ ಸಹ ಪ್ರಭುತ್ವ ಅಂಕೆಯನ್ನು ಮೀರಿ ಕೊನೆಗೆ ಕರ್ಣನ ಗುಣಕ್ಕೆ ಮೆಚ್ಚಿ ತನ್ನ ಕಾವ್ಯದಲ್ಲಿ ನೆನೆಯಬೇಕಾದ ಪಾತ್ರ ಎಂದರೆ ಅದು ಕರ್ಣನೇ ತನ್ನ ಇಡೀ ತನ್ನ ಕಾವ್ಯವು ಕರ್ಣರಸಾಯನವಾಗಿದೆ ಎಂದು ಉದ್ಗಾರವೆತ್ತಿದ್ದಾನೆ.
ನೆನಯದಿರಣ್ಣ ಭಾರತದೊಳಿಂ ಪೆ¾ರಾರುಮನೊಂದೆ ಚಿತ್ತದಿಂ
ನೆನೆವೊಡೆ ಕರ್ಣನಂ ನೆನೆಯ ಕರ್ಣನೊಳಾರ್ ದೊರೆ ಕರ್ಣನೇಱು ಕ
ರ್ಣನ ಕಡುನನ್ನಿ ಕರ್ಣನಳವಂಕದ ಕರ್ಣನ ಚಾಗಮೆಂದು ಕ
ರ್ಣನ ಪಡೆಮಾತಿನೊಳ್ ಪುದಿದು ಕರ್ಣ ರಸಾಯನಮಲ್ತೆ ಭಾರತಂ|| ವಿ.ವಿ.೧೨-೨೧೭.
ಅಲ್ಲದೇ ಇಡೀ ಕಾವ್ಯದ ನಾಯಕ ಪಾತ್ರ ಮುಖ್ಯವಾಗ ಬೇಕಾದುದು, ಇಡೀ ಕಾವ್ಯದಲ್ಲಿ ಅರ್ಜುನನ ಪರಾಕ್ರಮವನ್ನೇ ವರ್ಣಿಸಿದ್ದರೂ ಕೊನೆಗೆ ಕೇವಲ ಅರ್ಜುನನಿಂದ ಮಾತ್ರವಲ್ಲ ನನ್ನ ಕಾವ್ಯವು ಲೋಕ ಪೂಜ್ಯವಾಗುವುದು ಅದು ದರ‍್ಯೋಧನ ಕರ್ಣ ಶಲ್ಯ ಭೀಷ್ಮ ದ್ರೋಣ ಧರ್ಮರಾಯ ಭೀಮ ಇವರಿಂದ ಎಂದು ತನ್ನ ಏಕ ನಾಯಕ ಕಲ್ಪನೆಗೆ ಪೆಟ್ಟುಕೊಟ್ಟಿದ್ದಾನೆ. ಪಂಪನು ತನ್ನ ಕಾವ್ಯದಲ್ಲಿ ತನ್ನ ಕಾಲದ ತಲ್ಲಣಗಳನ್ನು ಒಳಗೊಂಡು ನಿಜವಾದ ಜನಮಾನಸದ ಆಳದಲ್ಲಿನ ಅನಿಸಿಕೆಗಳನ್ನು ಹುದುಗಿಸಿದ್ದಾನೆ ಅದನ್ನೇ ಪಂಪನ ಸಮಸ್ತ ಭಾರತ ಪರಿಕಲ್ಪನೆಯಾಗಿದೆ. ವಿಕ್ರಮಾರ್ಜುನ ವಿಜಯವು ತನ್ನ ಕಾಲದ ಸಾಮಾಜಿಕ ನಂಬಿಕೆಗಳು ವಾಸ್ತವಗಳ ಅವುಗಳ ಸ್ವರೂಪದ ವಿವರಗಳ ನಡುವೆ ಒಡಲಾಳದ ಸಂವೇದನೆಯನ್ನು ಒಳಗೊಂಡಿದೆ. ಪ್ರಭುತ್ವದ ಮೌಲ್ಯಗಳಿಗೆ ಬಲಿ ಬೀಳದೆ ಪಂಪ ತನ್ನ ದಿಟ್ಟವಾದ ರಾಜತ್ವ ಪರವಾದ ನಿಲುವಿನ ಹಿನ್ನೆಲೆಯಲ್ಲಿಯೂ ಅದನ್ನು ಮೀರಿ ಮಾತನಾಡಿದ್ದಾನೆ. ಕವಿ ತನ್ನ ಕಾಲದ ವಾಸ್ತವಿಕತೆಯನ್ನು ಚಿತ್ರಿಸುತ್ತಲೇ ಸಾರ್ವರ್ತಿಕವಾದ ಮೌಲಿಕವಾದದನ್ನು ಎತ್ತಿ ಹಿಡಿಯುತ್ತಾನೆ.
Comentarios