ನೆಲೆಯಿಲ್ಲದವರು ನಾವು
- poorna drishti
- Feb 4
- 1 min read
ಹಿಂದಿ ಮೂಲ - ಡಾ. ಮನು
ಕನ್ನಡಕ್ಕೆ: ಡಾ. ನಾಗರತ್ನ ಕೆ
ಹಿಂದಿ ಸ್ನಾತಕೋತ್ತರ ವಿಭಾಗ
ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ
ಸೂರಿಲ್ಲದವರು ನಾವು
ಮನೆ ಇದ್ದರೂ ಇಲ್ಲದಂತಿರುವವರು
ಬಂಧುಗಳಿದ್ದರೂ
ಬಂಧ ವನರಿಯದವರು
ಕಾಡದಿರು ಒಂಟಿತನವೇ
ತನುಮನಗಳಲ್ಲಿ,
ಬಾರದಿರುವ
ನಾಳೆಗಳ
ಕಿಡಿಗಳಿವೆ ಇಲ್ಲಿ.
Comentarios