ತಂಗಾಳಿಯ ತುಂಟಾಟ
- poorna drishti
- Feb 4
- 1 min read
ಹಿಂದಿ ಮೂಲ - ಡಾ. ಮನು
ಕನ್ನಡಕ್ಕೆ: ಡಾ. ನಾಗರತ್ನ ಕೆ
ಹಿಂದಿ ಸ್ನಾತಕೋತ್ತರ ವಿಭಾಗ
ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ
ಸಮಯಕ್ಕೂ ಸರಿಯುವ
ತವಕವಿದೆ ಇಲ್ಲಿ.
ತಂಗಾಳಿಯ
ಚೆಲ್ಲಾಟ
ಕಾಗದಗಳ ಜೊತೆ
ಕಣ್ಣಾ ಮುಚ್ಚಾಲೆಯಾಟ
ಆದರೂ
ಗಾಳಿಯೊಂದಿಗೆ
ಹಾರಾಡುವಾಸೆ
ಕಾಗದಕ್ಕೂ ಇರಬಾರದೇಕೆ?
ಕಾಗದಗಳು
ಹಾರುವ ಭಯಕ್ಕೆ
ಮೇಲೆ ಭಾರವಿಡುವೆವೇಕೆ?
ಗಾಳಿ ಯೊಂದಿಗಿನ
ಅದರ ಸರಸವನ್ನು
ಕಡೆಗಣಿಸು ವೆವೇಕೆ?
ಸದ್ದಿಲ್ಲದಂತೆ
ಅದುಮಿಟ್ಟಿದೆ ಕಾಗದ
ಹಾರುವ ತನ್ನಿಚ್ಛೆಯ
ಗಾಳಿ ಸುಳಿಯುವವರೆಗೆ.
ಈ ಕಣ್ಣಾ ಮುಚ್ಚಾಲೆಯಾಟ
ತುಂಟಾಟ
ಇರಬಹುದೇ ಪ್ರೀತಿ?
ಹಿಂದೊಂದು ಕಾಲದಲಿ
コメント