ಉರಿಯುತ್ತಿರು
- poorna drishti
- Feb 4
- 1 min read
ಹಿಂದಿ ಮೂಲ - ಡಾ. ಸುಭಾಷ್ ರಾಯ್
ಕನ್ನಡಕ್ಕೆ: ಡಾ. ನಾಗರತ್ನ ಕೆ
ಹಿಂದಿ ಸ್ನಾತಕೋತ್ತರ ವಿಭಾಗ
ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ
ಬೆಂಕಿ ಇಂದಲೇ ಕಲಿತೆ ನಾನು
ಉರಿಯುವುದನ್ನು
ಇಷ್ಟಿಷ್ಟೇ ಒಟ್ಟು ಗೂಡಿಸುತ್ತಿರುವೆ
ತಾಪವನ್ನು.ಏಕೆಂದರೆ
ಗೊತ್ತಿದೆ ನನಗೆ ಮುಂದೊಂದು ದಿನ
ಆಸ್ಫೋಟ ವಾಗುವುದೆಂದು
ಮಂಕಾಗಿರುವ ಕಿಡಿಗಳು
ಜ್ವಾಲೆಯಾಗುವುವೆಂದು.
Comments