top of page

ಮುಳ್ಳೂರು ನಾಗರಾಜ್ ಅವರ ಆತ್ಮಕಥನಗಳು ಮತ್ತು ಹೃನ್ಮನ ಪರಿವರ್ತನೆ

Updated: Oct 19, 2022


ಡಾ. ನೆಲ್ಲಿಕಟ್ಟೆ ಎಸ್.ಸಿದ್ದೇಶ್, ಎಂ.ಎ. ಎಂ.ಇಡಿ., ಪಿಜಿಡಿಜೆ.,ಪಿಎಚ್.ಡಿ.

ಸಹಾಯಕ ಪ್ರಾಧ್ಯಾಪಕರು, ಕನ್ನಡಭಾರತಿ, ಕುವೆಂಪು ವಿಶ್ವವಿದ್ಯಾನಿಲಯ

ಜ್ಞಾನಸಹ್ಯಾದ್ರಿ, ಶಂಕರಘಟ್ಟ-೫೭೭೪೫೧



ಕನ್ನಡ ಸಾಹಿತ್ಯ ಕಲ್ಪನಾ ಲೋಕವನ್ನು ಮತ್ತು ವಾಸ್ತವಲೋಕವನ್ನು ಕಣ್ಮುಂದೆ ನಿಲ್ಲಿಸಿ, ಓದುಗ ಸಂಭ್ರಮ ಮತ್ತು ಸಂಕಟಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ಮಾಡುವುದು. ಅಧ್ಯಯನದ ಅನುಕೂಲಕ್ಕಾಗಿ ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಕಾಲಘಟ್ಟದ ಕನ್ನಡ ಸಾಹಿತ್ಯ ಎಂದು ವಿಭಜಿಸಿಕೊಳ್ಳಲಾಗಿದೆ. ಬಹು ನದಿಗಳು, ಬಹು ಹಳ್ಳಕೊಳ್ಳಗಳು, ಬಹು ಕೆರೆಬಾವಿಗಳು ಅಸ್ತಿತ್ವದ ಅಲೆಯಲ್ಲಿ ನೆಲೆ ಕಂಡುಕೊAಡಿರುವುದು ಆಧುನಿಕ ಕನ್ನಡ ಸಾಹಿತ್ಯದಲ್ಲಿ. ಈ ಕಾಲಘಟ್ಟದ ದಲಿತ ಸಾಹಿತ್ಯ ದಮನಿತರ ಬದುಕಿನ ಬವಣೆಗಳಿಗೆ ಸ್ಪಂದಿಸಿ, ಮಾನವ ಪ್ರೀತಿಯನ್ನು ಮತ್ತು ಮನುಷ್ಯತ್ವದ ನೀತಿಯನ್ನು ಬಿತ್ತಿದೆ. ಅವಮಾನ, ಅಗೌರವಗಳಿಗೊಳಪಡಿಸಿ, ಮಾನಸಿಕ ಮತ್ತು ದೈಹಿಕ ಹಿಂಸೆಗಳನ್ನು ನೀಡುತ್ತಿದ್ದ ಶೋಷಕ ಸಮೂಹದ ವಿಕೃತ ನರ್ತನಗಳನ್ನು ಹಸಿಹಸಿಯಾಗಿ ದಾಖಲಿಸಿರುವ ಕನ್ನಡ ದಲಿತಸಾಹಿತ್ಯ ಈ ನೆಲದ ನೈಜ ಚರಿತ್ರೆಯನ್ನು ಕಟ್ಟಿಕೊಟ್ಟಿದೆ. ‘ಬಾಯಲ್ಲಿ ಬೆಣ್ಣೆ ಬಗ್ಗಲಲ್ಲಿ ದೊಣ್ಣೆ ’ ಎಂಬAತೆ ನಟಿಸುವವರ ನಡುವೆ ನಾಳಿನ ದಿನಗಳನ್ನು ಕಾಣುವುದು ಬಹು ಪ್ರಯಾಸದ ಕೆಲಸ. ಅಂತಹ ಆಯಾಸ- ಪ್ರಯಾಸಗಳನ್ನು ಕಟ್ಟಿಕೊಡುವ ದಲಿತ ಸಾಹಿತ್ಯ ಕಥೆ, ಕವಿತೆ, ನಾಟಕ, ಕಾದಂಬರಿ, ಜೀವನ ಚರಿತ್ರೆ, ಆತ್ಮಚರಿತ್ರೆ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ರಚನೆಗೊಂಡಿದೆ. ಸಾಮಾಜಿಕ ಸಂರಚನೆಗೆ ಸನ್ಮಾರ್ಗದರ್ಶನ ಮಾಡಿದೆ.


ಬದುಕು ಹತ್ತು ಹಲವು ತೊಡಕುಗಳ ಸರಮಾಲೆ. ಇದರಲ್ಲಿ ಸೋಲುವುದೆಷ್ಟು, ಗೆಲ್ಲುವುದೆಷ್ಟು ಎಂದು ತೂಗಿ ನೋಡುವುದು ಕಷ್ಟಸಾಧ್ಯ. ಸಹಸ್ರ ಸಮಸ್ಯೆಗಳ ನಡುವೆ ಸಾಧನೆ ಮಾಡುವುದು ಅಷ್ಟು ಸುಲಭವಾದುದಲ್ಲ. ಸಾವಿರಾರು ಸಂಕಟಗಳು ಬಂದರೂ ಕೂಡ ಅದಕ್ಕೆ ಹೆದರಿ ಚಿಂತೆಯಲ್ಲಿ ಬೆಂದು ಹೋಗದೆ, ಕೆಚ್ಚೆದೆಯಿಂದ ಎದುರಿಸಿ ಬಾಳುವುದು ನಿಜಜೀವನ. ಹಾಗಾಗಿ ಅಂಥ ನಿಜಜೀವನ ನಿರ್ವಹಿಸಿದವರು ಕ್ಷಣ ಕ್ಷಣಗಳಲ್ಲಿನ ಘಟನೆಗಳನ್ನು ದಾಖಲಿಸುವ ಮೂಲಕ ಓದುಗರಲ್ಲಿ ಸಹನೆಯನ್ನು, ಕಷ್ಟಸಹಿಷ್ಣುತೆಯ ಮನೋಧರ್ಮವನ್ನು ಬೆಳೆಸುವುದರ ಮೂಲಕ ಸಾಧನೆಯ ಹಾದಿಗೆ ಸ್ಫೂರ್ತಿಯ ಚಿಲುಮೆಯಾಗುವರು.


ಕನ್ನಡ ದಲಿತ ಸಾಹಿತ್ಯ ಮತ್ತು ದಲಿತ ಕನ್ನಡಿಗರ ಏಳಿಗೆಗೆ ಅಪೂರ್ವ ಕಾಣ್ಕೆ ನೀಡಿದವರಲ್ಲಿ ಮುಳ್ಳೂರು ನಾಗರಾಜ್ ಅವರು ಒಬ್ಬರು. ಪ್ರತಿ ವ್ಯಕ್ತಿ ಬರೀ ವ್ಯಕ್ತಿಯಾಗಿಯೇ ಉಳಿಯದೇ, ಆತನು ಅಥವಾ ಆಕೆಯು ಶಕ್ತಿಯಾದಾಗ ಆದರ್ಶ ಮತ್ತು ಅನುಕರಣೆಗೆ ಯೋಗ್ಯರಾಗುತ್ತಾರೆ. ವ್ಯಕ್ತಿ, ಶಕ್ತಿಯಾಗಲು ಪಟ್ಟಪಾಡುಗಳು, ತಿಂದೆಟುಗಳು, ಉತ್ಪೆçÃಕ್ಷೆಯಾಗದೆ, ನಿರಪೇಕ್ಷೆಯೂ ಆಗದೆ ಸಮತೂಕದಲ್ಲಿ, ಸತ್ಯ ನೆಲೆಯಲ್ಲಿ, ವಾಸ್ತವದ ಅಲೆಯಲ್ಲಿ ಅನುಭವಗಳು ಕಥನಗಳಾಗಿ ಅವರಿಂದಲೇ ಅಭಿವ್ಯಕ್ತಗೊಂಡಾಗ ಆತ್ಮಚರಿತ್ರೆಯಾಗುತ್ತದೆ. ಆತ್ಮಚರಿತ್ರೆಗಳು ನಾಡಿನ, ದೇಶದ ನೈಜ ಇತಿಹಾಸಕ್ಕೆ ಪುಷ್ಠಿಕೊಡುವ ದಾಖಲೆಗಳು. ಇವುಗಳನ್ನು ಆಧರಿಸಿ ಚರಿತ್ರೆಯನ್ನು ಪುನರ್ ಕಟ್ಟುಬೇಕು. ಆತ್ಮಚರಿತ್ರೆಗಳಲ್ಲಿ ಆಯಾಯ ಕಾಲಘಟ್ಟದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ಕ್ಷೇತ್ರಗಳ ನೈಜಚಿತ್ರಣವಿರುತ್ತದೆ. ಆತ್ಮಚರಿತ್ರೆಗಳನ್ನಾಧರಿಸಿದಾಗ ಇತಿಹಾಸ ನೈಜ ಸಂಗತಿ, ಘಟನೆ ಮತ್ತು ಅನುಭವಗಳಿಂದ ದಾಖಲಾಗಿ ಪರಿಣಾಮಕಾರಿಯಾದ ಪ್ರಭಾವವನ್ನು ಬೀರುವುದು. “ಆತ್ಮಕಥೆಗಳು ತಮ್ಮ ಒಟ್ಟಂದದಲ್ಲಿ ಕೇವಲ ಗತಕಾಲದ ನಿರ್ದಿಷ್ಟತೆಯಲ್ಲಿ ಗಿರಕಿ ಹೊಡೆಯುವ, ವಿಶ್ರಾಂತಿ ಪಡೆಯುವ ಜಡ ಬರಹಗಳಾಗಿರುವುದಿಲ್ಲ. ಲೇಖಕರು ಬದುಕುತ್ತಿರುವ ಸಮಾಜದ ಸಮಕಾಲೀನ ಒತ್ತಡಗಳು ಹಾಗೆ ಜಡವಾಗಿರಲು ಬಿಡುವುದಿಲ್ಲ. ಗತವನ್ನು ವರ್ತಮಾನದಲ್ಲಿ ಪರಿಗ್ರಹಿಸುವ ಮತ್ತು ಅದೇ ಕಾಲಕ್ಕೆ ಗತಕಾಲದ ಬೆಳಕಿನಲ್ಲಿ ವರ್ತಮಾನವನ್ನು ವ್ಯಾಖ್ಯಾನಿಸುವ ಮತ್ತು ಮೌಲ್ಯೀಕರಿಸುವ ಸೃಜನಶೀಲದ ಹಾಗೂ ಸೈದ್ಧಾಂತಿಕವಾದ ಕೆಲಸಗಳು ಏಕಕಾಲಕ್ಕೆ ನಡೆಯುತ್ತಿರುತ್ತವೆ.” (ಡಾ. ಬಿ.ಎಂ. ಪುಟ್ಟಯ್ಯ-ಆತ್ಮಕಥೆಗಳಲ್ಲಿ ಕರ್ನಾಟಕದ ಕತೆ-ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ-೧೯೯೯ ಪುಟ ಸಂಖ್ಯೆ-೧೦) ಹಾಗಾಗಿ ಆತ್ಮಕಥೆಗಳು ಅನುಭವಗಳ ವಿಸ್ತರಣೆಗೆ ಸ್ಫೂರ್ತಿಯ ವಾಹಿನಿಗಳು.


ಅನ್ಯಾಯ, ಅದಕ್ಷತೆ, ಅಸಮಾನತೆಗಳ ವಿರುದ್ಧದ ಹೋರಾಟವನ್ನೇ ಉಸಿರಾಗಿಸಿಕೊಂಡವರು ಮುಳ್ಳೂರು ನಾಗರಾಜ್‌ರವರು. ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳೆಂಬ ಮಹಾಮಂತ್ರಗಳನ್ನು, ಮಹಾಕಾರ್ಯಗಳನ್ನು ಹೇಳಿಕೊಟ್ಟ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್‌ರವರು ತೋರಿದ ಮಾರ್ಗದಲ್ಲಿ ಸಾಗಿ ಸಾಗಿ ಸಾಧನೆಗಳ ಸೌಧಗಳನ್ನು ಕಟ್ಟಿದವರು ಮುಳ್ಳೂರು ನಾಗರಾಜ್‌ರವರು. ನೊಂದು ಬೆಂದು ಶಿಕ್ಷಣ ಪಡೆದ ನಾಗರಾಜ್ ಅವರು ನೊಂದವರ ನೋವಿಗೆ, ಬೆಂದವರ ಬೆವರಿಗೆ ತಕ್ಷಣ ಸ್ಪಂದಿಸಿ ಆ ಯಾತನೆಗಳ ಮತ್ತು ವೇದನೆಗಳ ನಿವಾರಣೆಗಾಗಿ ಹೆಣಗಾಡಿದ ಸಾಧಕರು. ಸಾವಿಲ್ಲದ ಸಾಹಿತ್ಯಕ್ಕೆ ವಸ್ತುವಾಗುವಷ್ಟರ ಮಟ್ಟಿಗೆ ತಮ್ಮ ಉಸಿರು ಇರುವ ತನಕ ಹೋರಾಡಿದವರು. ಸಾಹಿತಿಯಾಗಿ, ಸಮಾಜ ಸೇವಕರಾಗಿ, ಸಮಾಜ ಸುಧಾರಕರಾಗಿ, ಸಂಘಟಕರಾಗಿ, ಕಾರ್ಯಕರ್ತರಾಗಿ, ಸಾವಿರಾರು ಮಂದಿಯ ಮನಗಳಲ್ಲಿನ ಮಾಲಿನ್ಯವನ್ನು ತೊಳೆಯುವ ಸಲುವಾಗಿ ದುಡಿದ, ಅವರ ದುಡಿಮೆ ಅಕ್ಷಯ ನಿಧಿ. ಆ ಅಕ್ಷಯನಿಧಿಗೆ ಅವರ ಜೀವನ ಮತ್ತು ಸಾಧನೆಯೇ ರನ್ನಗನ್ನಡಿ. ಕರಿಯನ್ನು ಕನ್ನಡಿಯಲ್ಲಿ ತೋರಿಸುವಂತೆ ಅವರು ‘ಮಾಮರದ ಮೇಲೊಂದು ಕೋಗಿಲೆ ’ ಮತ್ತು ‘ ಚಳುವಳಿಯ ಗರ್ಭದಲ್ಲಿ ’ ಎಂಬೆರಡು ಆತ್ಮಚರಿತ್ರೆಗಳಲ್ಲಿ ನಿಕ್ಷೇಪಗೊಳಿಸಿದ್ದಾರೆ.


೨೦೦೪ರಲ್ಲಿ ಪ್ರಕಟವಾದ ನನ್ನ ಆತ್ಮಚರಿತ್ರೆಯ ಮೊದಲ ಭಾಗ `ಮಾಮರದ ಮೇಲೊಂದು ಕೋಗಿಲೆ ’ ವ್ಯಾಪಕವಾದ ಪ್ರಶಂಸೆಗೊಳಗಾಯಿತು. ನಾನು ಬರೆಯಬಹುದಾದ ಬಹುಪಾಲನ್ನು ಆಗ ಬರೆಯಲು ಆಗಿರಲಿಲ್ಲ. ಹಾಗಾಗಿ ಸವಿಸ್ತಾರವಾದ ವಿವಿಧ ಪ್ರಸಂಗಗಳನ್ನು ಮತ್ತೆ ದಾಖಲಿಸುತ್ತಾ ಹೋದೆ. ದಲಿತ ಚಳುವಳಿಯ ಆರ್ದ್ರ ಗಳಿಗೆಗಳು ಇಲ್ಲಿ ಒಡಮೂಡಿವೆ. ಬಹುಪಾಲು ದಲಿತ ಚಳುವಳಿಯನ್ನು ಕುರಿತ ನನ್ನ ವೈಯಕ್ತಿಕ ಅನುಭವಗಳು ಇಲ್ಲಿ ಹೆಚ್ಚಾಗಿರುವುದರಿಂದ, ಬದುಕಿನ ಕಠಿಣ ಸವಾಲುಗಳು ಹೆಚ್ಚಾಗಿ ಮಿಳಿತವಾಗಿರುವುದರಿಂದ ಈ ಆತ್ಮಚರಿತ್ರೆಯ ಮುಂದುವರಿದ ಭಾಗಕ್ಕೆ ‘ಚಳುವಳಿಯ ಗರ್ಭದಲ್ಲಿ’ ಎಂಬ ಹೆಸರು ನೀಡಿರುವೆ ’’ ಎಂದು ಮುಳ್ಳೂರು ನಾಗರಾಜ್ ಅವರು ಹೇಳುವ ಮೂಲಕ ತಮ್ಮ ಆತ್ಮಕಥನಗಳ ಉದ್ದೇಶವನ್ನು ಸ್ಪಷ್ಟಗೊಳಿಸಿರುವರು.


ಹನ್ನೆರಡು ಅಧ್ಯಾಯಗಳನ್ನೊಳಗೊಂಡಿರುವ `ಮಾಮರದ ಮೇಲೊಂದು ಕೋಗಿಲೆ ‘-ಎಂಬ ಆತ್ಮಕಥನದಲ್ಲಿ ಬಾಲ್ಯ ಬದುಕಿನಲ್ಲಿ ಮಂಜು ಮಂಜಾದ ಅವಮಾನ ಅಪಮಾನಗಳ ಎಳೆಗಳನ್ನು ಬಿಡಿಸಿಟ್ಟಿದ್ದಾರೆ. ಬಾಲ್ಯ ಬದುಕು ಕಂಡ ಈ ವ್ಯವಸ್ಥೆಯ ಕ್ರೂರತೆ, ಕಪಟತನವನ್ನು ಬಯಲುಗೊಳಿಸಿರುವರು. ಸಿಂಹಾವಲೋಕನಕ್ರಮದಿAದ ಎಣೆದು ಕಟ್ಟಿರುವ ಈ ಕಥನದಲ್ಲಿ ದಲಿತ ಕೇರಿಯ ವಾಸ್ತವ ಅನುಭವಗಳು ಅಕ್ಷರರೂಪದಲ್ಲಿ ಅಭಿವ್ಯಕ್ತಗೊಂಡಿವೆ. ಏಕಾಂತ ಸೆರೆವಾಸದ ಒಂದು ದಿನ ’ಎಂಬ ಅನುಭವದಿಂದ ಆರಂಭವಾಗಿ `ಹೊಳೆವ ಕಂಗಳ ದ್ವೀಪದಲ್ಲಿ’-ಎಂಬ ಅನುಭವದೊಂದಿಗೆ ಮುಕ್ತಾಯಗೊಳ್ಳುವುದು. ಇಲ್ಲಿನ ಅನುಭವಗಳು ಚಲನಚಿತ್ರದಂತೆ ಕಣ್ಮುಂದೆ ಚಲಿಸುತ್ತಾ ಕರುಳನ್ನು ಕಿವುಚಿಕೊಳ್ಳುವಂತೆ ಮಾಡಿಬಿಡುತ್ತವೆ.


ಅಪ್ಪನ ಊರಿನ ನೆನಪು ಮತ್ತು ಪ್ರೀತಿ ಅಗಾಧ. ಅಪ್ಪ ದೊಡ್ಡ ಹುಡುಗನಾದರೂ ಗೋಲಿಗಜ್ಜುಗ ಆಡುತ್ತಾ, ಅಕ್ಷರ ಕೂಡಾ ಕಲಿಯದೆ ಇದ್ದ ಕಾಲದಲ್ಲಿ ಅಪ್ಪನ ಸೋದರ ಸಂಬAಧಿಯೊಬ್ಬರು ಅವರನ್ನು ಹಿಡಿದು ಸ್ಕೂಲಿಗೆ ಹಾಕಿದರು. ಅದರಿಂದಾಗಿಯೇ ಅಪ್ಪ ಅಕ್ಷರ ಕಲಿಯಲು ಸಾಧ್ಯವಾಯಿತು. ನನ್ನ ತಾತ ಯಾವ ಜವಾಬ್ದಾರಿಯೂ ಇಲ್ಲದೆ ಬೆಳೆದ ಮನುಷ್ಯ. ನನ್ನ ಚಿಕ್ಕ ಮಾವ ಡೋಲು ಬಡಿಯುವ ಕಲೆಗಾರ, ದೊಡ್ಡ ಮಾವ ದನಗಳ ವ್ಯಾಪಾರ ಬಲ್ಲ ಚುರುಕಾದ ದಲ್ಲಾಳಿ,...ಅಜ್ಜನ ಸಜ್ಜನಿಕೆ, ಗೇಲಿಗುಣ, ನಗುಮುಖ ಮತ್ತು ತಮಾಷೆಯ ಮಾತು ಅಜ್ಜಿಗಿರಲಿಲ್ಲ. ವ್ಯಂಗ್ಯ ಕಟಕಿ ಲೇವಡಿ ವಿಡಂಬನೆ ಹಾಗೂ ಟೀಕೆಯ ಸ್ವಭಾವ ಅಜ್ಜಿಯದು.’’(ಪು. ಸಂ-೯-೧೫)ಹೀಗೆ ತನ್ನವರ ವಿಭಿನ್ನ ಮನೋಧರ್ಮಗಳನ್ನು ಪರಿಚಯಿಸಿರುವರು. ಮಣ್ಣಿನ ಗೋಡೆಯ, ಸಗಣಿ ನೆಲದ ಮನೆಯು ತುಂಬಾ ಕೊಳಕಾಗಿದ್ದರೂ ಅಲ್ಲಿನ ಪ್ರೀತಿವಾತ್ಸಲ್ಯಗಳು ಅಪೂರ್ವವಾದವುಗಳು. ಅಜ್ಜಿಯ ಮನೆಯಲ್ಲಿ ಬಾಲ್ಯವನ್ನು ಕಳೆಯುವಾಗಿನ ಅವ್ವನ ಸಂಕಟಗಳ ಘಟನೆಗಳ ಚಿತ್ರಣಗಳನ್ನು ದಾಖಲಿಸಲಾಗಿದೆ.


ಕೆ.ಆರ್. ನಗರದಲ್ಲಿನ ತಮ್ಮ ಮನೆಯ ಸಮೀಪದಲ್ಲಿದ್ದ ಬ್ರಾಹ್ಮಣ ಕುಟುಂಬದ ಹೆಂಗಸಿಗೆ ಕಾಯಿ ಚೂರುಗಳನ್ನು ತಂದು ಕೊಡುತ್ತಿದ್ದ ಘಟನೆ ಮತ್ತು ಕ್ರಿಶ್ಚಿಯನ್ ಹೆಂಗಸ್ಸಿನ ನಾಲ್ಕಾಣೆ ಕಳೆದುಕೊಂಡ ಪ್ರಸಂಗ ದಲಿತರಲ್ಲಿನ ಸತ್ಯ, ನಿಷ್ಠೆ, ಪ್ರಾಮಾಣಿಕತೆಗಳು, ತಪ್ಪು ಮಾಡಿದ್ದರ ಖಿನ್ನತೆ, ಬ್ರಾಹ್ಮಣ ಹೆಂಗಸಿನ ಸಣ್ಣತನಗಳು, ಕ್ರಿಶ್ಚಿಯನ್ ಹೆಂಗಸಿನ ಉದಾರತೆಯು ಎಳೆಯ ಮನದಾಳಕ್ಕೆ ಇಳಿದ ಬಗೆಯನ್ನು ತಿಳಿಸುತ್ತವೆ. ಸರ್ಕಾರಿ ಅಧಿಕಾರಿಯಾಗಿದ್ದ ದಲಿತ ಲಾಲೋಜಿಯ ಕೌಟುಂಬಿಕ ಚಿತ್ರಣವು ಬಹುತೇಕ ದಲಿತ ಅಧಿಕಾರಿ, ನೌಕರರ ಕೌಟುಂಬಿಕ ಜೀವನದ ಪ್ರತಿನಿಧಿಯಂತಿದೆ. ಬಾಲ್ಯದಲ್ಲಿ ಬಿತ್ತಿದ ಭಯದ ಪರಿಣಾಮಗಳನ್ನು, ಘಟನೆಗಳನ್ನು ಬಿಡಿಸಿರುವ ಲೇಖಕರು ವ್ಯಕ್ತಿ ವಯಸ್ಸಿನಲ್ಲಿ ಹಿರಿಯನಾದರೂ ಮುದುಕನಾದರೂ, ಸಣ್ಣತನಗಳು ಬಿಡುವುದಿಲ್ಲವೆಂಬುದನ್ನು, ಚಪಲಚಿತ್ತ, ಕಾಮವಿಕಾರಗಳು ಹೇಗೆ ಬಾಧಿಸುತ್ತವೆಂಬುದನ್ನು ಕಂಡ ಘಟನೆಗಳ ಮೂಲಕ ನಿರೂಪಿಸಿರುವರು.


“ಸ್ಕೂಲಿನ ನನ್ನ ಜಗತ್ತು ಸಂಕ್ಷಿಪ್ತವಾದದ್ದು ಬೀದಿಯ ಲೋಕ ಅದ್ಭುತವಾದದ್ದು. ಅಗಾಧವಾದದ್ದು. ಬೀದಿಯನ್ನು ನೋಡುತ್ತಾ ಶಾಲೆಯನ್ನು ಗ್ರಹಿಸುತ್ತಾ ನಾನು ಬೆಳೆದದ್ದು ನನ್ನ ಪಾಲಿನ ಒಂದು ವಿಸ್ಮಯ” (ಪು. ಸಂ-೨೮). ನೆಲದಲ್ಲಿ ಬೆಳೆದ ಗಿಡದ ಬೇರು ಆಳವಾಗಿರುತ್ತದೆ. ಕುಂಡದಲ್ಲಿ ಬೆಳೆದ ಗಿಡದ ಬೇರು ಆಳಕ್ಕಿಳಿಯದೆ ಅಲುಗಾಡುತ್ತಲೇ ನಾಶದಂಚಿಗೆ ಬಹುಬೇಗ ತಲುಪಿಬಿಡುತ್ತದೆ. ನಮ್ಮ ಶಿಕ್ಷಣ ಕುಂಡದಲ್ಲಿ ಬೆಳೆಸುವ ಗಿಡವಾಗದೆ, ನೆಲದಲ್ಲಿ ಬೆಳೆಸುವ ಗಿಡವಾಗಬೇಕೆಂಬ ಸೂಚನೆಗಳು ಇಲ್ಲಿವೆ. ‘ಶಾಲೆಯಲ್ಲಿ ನಾನು’ ಎಂಬ ಅನುಭವದಲ್ಲಿ ‘ಜಾತಿ’À ಎಂಬ ವಿಷಬೀಜ ಬಿತ್ತುವ ಮನುಷತ್ವ ದ್ರೋಹಿ ಕೆಂಪಯ್ಯ ಮೇಷ್ಟç ಸಣ್ಣತನ, ಚಂದ್ರಶೇಖರಶಾಸ್ತಿç ಎಂಬ ಅಧ್ಯಾಪಕರಲ್ಲಿನ ಅಪಾರ ಮನುಷ್ಯ ಪ್ರೀತಿಯ ದೊಡ್ಡತನಗಳನ್ನು ಏಕಕಾಲದಲ್ಲಿ ಕಂಡು ಅನುಭವಿಸಿರುವುದನ್ನು ದಾಖಲಿಸುವ ಮೂಲಕ ಮೇಷ್ಟುçಗಳಾದವರು ಹೇಗಿರಬೇಕೆಂಬುದರ ಸನ್ಮಾರ್ಗದರ್ಶನವಿದೆ.


ರೇಷ್ಮೆ ಸೀರೆಯನ್ನು ಆರಾಧನೆಯ ನೆಲೆಯಲ್ಲಿ ಅನುಭವಿಸುತ್ತಿದ್ದ ಅವ್ವನಿಂದ ಆಕೆಯ ಗೆಳತಿ ಇಸೆದುಕೊಂಡು ವಾಪಾಸ್ಸು ನೀಡದೆ ಸತ್ತು ಹೋಗಿದ್ದು, ಅದಕ್ಕಾಗಿ ಅವ್ವನ ಸಂಕಟಗಳು ಪ್ರತಿ ದಲಿತ ಹೆಣ್ಣುಮಕ್ಕಳ ಸಂಕಟಗಳAತೆಯೇ ಚಿತ್ರಿತವಾಗಿವೆ. ಅಪ್ಪನಿಗಾಗುತ್ತಿದ್ದ ಕಿರುಕುಳ, ತನಗಾದ ಕಹಿ ಅನುಭವಗಳು, ಕುಡುಕರ ಅಮಾನವೀಯ ಕಾರ್ಯಗಳು, ವಂಚಕರ ಸಾಮಾಜಿಕ ದ್ರೋಹಗಳನ್ನು ಚಿತ್ರಿಸುವ ಲೇಖಕರು ಯೌವ್ವನದಲ್ಲಿನ ತಲ್ಲಣಗಳನ್ನು ದಾಖಲಿಸಿದ್ದಾರೆ.


‘ಕಾಲದ ಕೊರಳ ತುಂಬಾ ಕಣ್ಣೀರ ಮುತ್ತುಗಳು’ (ಪು-೩೫), ‘ಪ್ರೀತಿ ಅಂದರೆ ಸೃಜನಶೀಲತೆಯ ಒಂದು ಋತುಚಕ್ರ. ಸಾವನ್ನು ಗೆಲ್ಲಬಲ್ಲ ಈ ಚಕ್ರ ಚಲಿಸುತ್ತಲೇ ಇದೆ. ಜನರು ಸಾಯುತ್ತಿದ್ದರೂ ಪ್ರೀತಿಯು ನಿರಂತರ ಬೆಳೆಯುತ್ತಲೇ ಇದೆ.(ಪು.ಸಂ-೫೩), ‘ಪ್ರೇಮದ ಹಿಂದೆ ಚಲಿಸುವವರೆಲ್ಲರೂ ಭ್ರಮಾ ಜೀವಿಗಳಾಗಿರುತ್ತಾರೆ. ಪ್ರೇಮವನ್ನು ಅರಿತವರು ಮಾತ್ರ ಸಂತರಾಗಿರುತ್ತಾರೆ. ಪ್ರೇಮದ ಸಂಗೀತಾತ್ಮಕ ಗುಣವನ್ನು ಬಲ್ಲವರು, ಅದರ ನಡಿಗೆಯನ್ನು ಹಾಡಾಗಿ ಮಾಡಬಲ್ಲವರು ಕವಿಗಳಾಗುತ್ತಾರೆ. ಅದರಲ್ಲೇ ಕರಗಿ ತಮ್ಮನ್ನು ತಾವು ಕಳೆದುಕೊಳ್ಳುವವರು ಮಾತ್ರ ನಿಜವಾದ ಪ್ರೇಮಿಗಳಾಗುತ್ತಾರೆ. (ಪು. ಸಂ-೫೪) ‘ಜಾತಿ’ ಎಂಬುದು ಯಾರೋ ಕಟ್ಟಿದ ಗೋರಿ ಅದನ್ನು ನಮ್ಮದನ್ನಾಗಿ ನಾವು ಮಾಡಿಕೊಂಡಿದ್ದೇವೆ’(ಪು. ಸಂ-೫೭), ‘ಸಾವಿನ ನಂತರವೂ ಅಳಿಸಲಾಗದ ಬದುಕಿನ ಹೆಜ್ಜೆಗಳನ್ನು ಮೂಡಿಸುವ ಜೀವನ ಕ್ರಮವನ್ನು ಮನುಷ್ಯನು ಹುಡುಕುತ್ತಲೇ ಇದ್ದಾನೆ. (ಪು. ಸಂ-೬೦),


'ತನಗೆ ಸಿಕ್ಕದೆ ಇರುವುದನ್ನು ಹುಡುಕುತ್ತಾ ಹೋಗುವುದೇ ಬದುಕು’ (ಪು. ಸಂ.-೬೪), ‘ಸಾವಿನ ಹಕ್ಕಿಯ ರೆಕ್ಕೆಯ ಕೆಳಗೆ ಈ ಜಗತ್ತು ಚಲಿಸುತ್ತಿತ್ತು.’ (ಪು. ಸಂ-೬೫)`ಗAಡು ಹೆಣ್ಣುಗಳ ನಡುವಿನ ಪ್ರೇಮವು ಪ್ರಕೃತಿಯಷ್ಟೇ ಪ್ರಾಚೀನವಾದುದು. ಪ್ರೇಮದ ಮೇಲೂ ತನ್ನ ಹಕ್ಕು ಸ್ಥಾಪಿಸುವ ಜಾತಿಯು ಅತ್ಯಂತ ಕ್ರೂರವಾದದ್ದು’ (ಪು.ಸಂ-೭೨), ‘ಸೃಷ್ಟಿಯ ಬೆರಗು ಮತ್ತು ವಿನಾಶ, ಕನಸು ಮತ್ತು ಕಲೆಗಾರಿಕೆಯನ್ನು ಮಾನವ ತನ್ನ ಮೂಲಕವೇ ತಾನು ಕಾಣಬೇಕಾಗಿದೆ ’ (ಪು.ಸಂ-೭೩) ಎಂಬAತಹ ಅವರ ಅಪೂರ್ವವಾದ ಅನುಭವದ ನುಡಿಗಳು ಪದೇ ಪದೇ ಚಿಂತನ ಮಂಥನಕ್ಕೆಳೆಯುತ್ತವೆ. ಆ ಮೂಲಕ ಬದುಕು ಎಂದರೇನು? ಅದು ಹೇಗಿರಬೇಕು? ಎಂಬುದಕ್ಕೆ ಉತ್ತರವನ್ನು ಕಂಡುಕೊಳ್ಳಲು ಪ್ರೇರೇಪಿಸುತ್ತವೆ. ‘ನನ್ನ ಬಾಳು ಕೇವಲ ನನ್ನ ಬಾಳಲ್ಲ ನನ್ನ ಜತೆ ಬದುಕಿದ ಅನೇಕರಿಗೆ ಸೇರಿದ್ದು ಅದು (ಪು.ಸಂ-೭೬) ಎಂದು ಲೇಖಕರೇ ಹೇಳುವಂತೆ ಅವರ ಬಾಳಿನ ಅನುಭವಕ್ಕೆ ತೆಕ್ಕೆಗೆ ಬರುವ ಒಂದೊAದು ಪಾತ್ರಗಳು ಒಂದೊAದು ಘಟನೆಗಳು ಸಂದರ್ಭದ ತಲ್ಲಣ-ತವಕಗಳು ಈವೊತ್ತಿನ ಬದುಕನ್ನು ಗಟ್ಟಿಯಾಗಿಸಿಕೊಳ್ಳಲು ಪ್ರೇರೇಪಿಸುತ್ತವೆ.


ಮುಳ್ಳೂರು ಅವರ ಅಪ್ರಕಟಿತವಾದ ‘ಚಳುವಳಿಯ ಗರ್ಭದಲ್ಲಿ’ ಎಂಬ ಆತ್ಮಚರಿತ್ರೆ ವ್ಯಕ್ತಿ-ಸಮಾಜ-ಸಂಘಟನೆಗಳ ನಡುವಿನ ಸಂಘರ್ಷ ಮತ್ತು ಸಂಕಟಗಳನ್ನು ಸಾವಧಾನವಾಗಿ ನಿರೂಪಿಸುತ್ತದೆ. ಈ ಕೃತಿಯು ಸಬ್ ಇನ್ಸ್ಪೆಕ್ಟರ್ ಎಲ್ಲಪ್ಪನ ಕಲ್ಲು ಹೃದಯದ ಅನಾವರಣದೊಂದಿಗೆ ಆರಂಭವಾಗಿ ದಲಿತರ ಪ್ರಗತಿಗಾಗಿ ತಮ್ಮ ಇಡೀ ಬದುಕನ್ನು ಸಮರ್ಪಿಸಿಕೊಂಡಿರುವ ಹರಿಹರ ಆನಂದಸ್ವಾಮಿಯವರ ಪರಿಚಯದವರೆಗೆ ವ್ಯಾಪಿಸಿಕೊಂಡಿದೆ.


‘ಕನಸುಗಳನ್ನು ಕಾಣಬಹುದಾದ ಎಳೆಯ ವಯಸ್ಸಿನಲ್ಲಿ ಲೋಕದ ಕಷ್ಟಗಳನ್ನು ಹೆಗಲ ಮೇಲೆ ಹೊತ್ತು ಚಳುವಳಿ ದಾರಿಯಲ್ಲಿ ಚಲಿಸುತ್ತಿದ್ದೆ. ಈ ಪಯಣದಲ್ಲಿ ನಾನು ಏಕಾಂಗಿಯಾಗಿರಲಿಲ್ಲ. ನನ್ನ ಜತೆ ಅನೇಕ ಸ್ನೇಹಿತರಿದ್ದರು. ಆಪ್ತರಿದ್ದರು. ಆಗ ಬದುಕಿನ ಬೆಲೆಯನ್ನೇ ತಿಳಿಯದ ಯೌವ್ವನ ನನ್ನ ಬಳಿಯಿತ್ತು. ವಿದ್ಯೆಯನ್ನು ಕಟ್ಟಿಕೊಳ್ಳುವ ಬದಲು ಪದ್ಯವನ್ನು ಕಟ್ಟಿಕೊಂಡ ಆ ಕಾಲ ತುಂಬಾ ಅಪ್ಯಾಯಮಾನಾದದ್ದೇ ಸರಿ. ಹೆಗಲ ಮೇಲೆ ಬ್ಯಾಗ್. ಬ್ಯಾಗಿನಲ್ಲಿ ತುಂಬಿ ತೂಗುವ ಕವಿತೆಗಳು. ಕವಿತೆಗಳೊಡನೆ ಹಗಲು ರಾತ್ರಿ ಸಂಚಾರ. ಅನ್ಯಾಯಗಳ ವಿರುದ್ಧ ಸದಾ ಪುಟಿದೇಳುವ ಉತ್ಸಾಹ. ನನ್ನದೆನ್ನುವುದೇನೂ ಇಲ್ಲದಿದ್ದರೂ ನನ್ನದೇ ಎಲ್ಲವೂ ಆಗಿತ್ತು. ಅಥವಾ ನಾನು ಹಾಗೆಂದುಕೊAಡಿದ್ದೆ. ಮನೆಯಲ್ಲಿ ಕಾಲ ಕಳೆಯುವುದು ಕಷ್ಟವಾಗಿತ್ತು. ಆಗ ನಾನು ರಾಶಿ ರಾಶಿ ಪುಸ್ತಕಗಳನ್ನು ಮುಂದಿಟ್ಟುಕೊAಡು ಓದುತ್ತಿದ್ದೆ’’ ಎಂದೆಲ್ಲ ಹೇಳುವ ಮೂಲಕ ತಮ್ಮ ಬದುಕಿನ ಹಾದಿಯ ಆರಂಭಕ್ಕೆ ಸ್ಪಷ್ಟನೆಯನ್ನು ನೀಡಿರುವ ನಾಗರಾಜ್ ಅವರು ಸದಾ ಸಮಾಜ- ಸಂಘಟನೆ ಹೋರಾಟದಲ್ಲೇ ನಿರತರಾದರು. ಪೋಲೀಸರು, ರಾಜಕಾರಣಿಗಳು, ಅಧಿಕಾರಿಗಳು, ಮೇಲುಜಾತಿಯವರು, ಕೆಳಜಾತಿಯವರು, ಸಂಘಟನೆಯಲ್ಲಿರುವ ಕಾರ್ಯಕರ್ತರು, ಸಾಹಿತಿಗಳು, ಕಲಾವಿದರು, ರೈತರು, ಕೂಲಿಕಾರ್ಮಿಕರು, ಪತ್ರಕರ್ತರು, ಬಂಧುಮಿತ್ರರು, ಹೆಂಡತಿಮಕ್ಕಳು, ಅಪ್ಪ-ಅವ್ವ, ಅಣ್ಣ-ತಮ್ಮ, ಅಕ್ಕ-ತಂಗಿ ಮೊದಲಾದವರುಗಳು ಸಣ್ಣತನ- ದೊಡ್ಡತನಗಳನ್ನು ಆಯಾಯ ಸಂದರ್ಭಗಳಿಗೆ ಅನುಸಾರವಾಗಿ ಎಣೆದಿದ್ದಾರೆ.


“ಈ ದೇಶದಲ್ಲಿ ಮನುಷ್ಯ ಮನುಷ್ಯರ ನಡುವೆ ಅಪನಂಬಿಕೆಗಳ ಸಮುದ್ರವೇ ಇದೆ. ಇದಕ್ಕಿಂತ ಹೆಚ್ಚಾಗಿ ಮೂಢನಂಬಿಕೆಗಳು ತಾಂಡವಿಸುತ್ತವೆ. ಜಾತಿ ಅಸಮಾನತೆಗಳು ಮಾತ್ರ ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಹೇಗೆ ನಿವಾರಿಸುವುದು ಇವುಗಳನ್ನು ಎಂದು ಗಲಿಬಿಲಿಗೊಂಡರೆ ನಮ್ಮ ದಿಕ್ಕಾಗಿ ಹೊಳೆಯುತ್ತಾರೆ ಡಾ. ಬಿ.ಆರ್. ಅಂಬೇಡ್ಕರ್ ಅವರು’’ ಎನ್ನುವ ಮುಳ್ಳೂರು ಅವರು ಅಸ್ಪೃಶ್ಯತೆಯ ನಿವಾರಣೆಗೆ ಹಳ್ಳಿ ಹಳ್ಳಿಗಳಲ್ಲಿ ಅಂಬೇಡ್ಕರ್ ಸಂಘಗಳನ್ನು ಸ್ಥಾಪಿಸಲು ಆರಂಭಿಸಿದರು. ಆ ಸಂದರ್ಭದಲ್ಲಿ ಒದಗಿ ಬಂದ ಸಂಕಷ್ಟಗಳು ಸಹಸ್ರ ಸಹಸ್ರ ಅವುಗಳಿಗೆ ಕುಗ್ಗದೆ ಸಾಧನೆಯ ಹಾದಿಯಲ್ಲಿ ಕುಪ್ಪಳಿಸಿದರು.


ಈ ‘ಜಾತಿ’ ಎಂಬ ವಿಷವೃಕ್ಷದ ದುಷ್ಭಲವನ್ನು ಜಾತ್ರೆ, ತೇರನ್ನು ಕದ್ದ ಘಟನೆಗಳಲ್ಲಿ ತಿಳಿಸಿರುವ ಲೇಖಕರು ಹಸಿವಿನ ಪ್ರಸಂಗಗಳನ್ನು ದಾಖಲಿಸಿರುವರು. ಹೆತ್ತು ಹೊತ್ತು ಬೆಳೆಸಿದ ಅಪ್ಪ ಅಮ್ಮನನ್ನು ಬಡತನದಿಂದ ಮುಕ್ತಗೊಳಿಸದೆ, ವೈಯಕ್ತಿಕ ಹಿತಾಸಕ್ತಿಗೆ ಗಮನಕೊಡದೆ ಸದಾ ಸಮಾಜ, ಜನರೆಂದು ಪರಿತಾಪಿತ್ತಿದ್ದ ನಾಗರಾಜ್‌ರವರನ್ನು ಅವರ ಸಾಮಿಪ್ಯದಲ್ಲೇ ಬೆಳೆದ ಕೆಲವರು ಕಾಲಕಸದಂತೆ ಕಂಡದ್ದನ್ನು ತುಂಬಾ ನೋವಿನಿಂದ ಹೇಳಿಕೊಳ್ಳುತ್ತಾರೆ.


ಮುಳ್ಳೂರು ನಾಗರಾಜ್ ಅವರ ಸೃಜನಶೀಲ-ಕ್ರಿಯಾಶೀಲ ಮನೋವಿಕಾಸವನ್ನು ಸಮಷ್ಟಿಯ ವಿಕಾಸದೆಡೆಗೆ ಅನ್ವಯಿಸಿಕೊಂಡು ಅನುಷ್ಠಾನದಲ್ಲಿ ನಿರತವಾಗಿ ಅದರಲ್ಲಿ ಸಫಲತೆ ಮತ್ತು ವಿಫಲತೆಯನ್ನು ಕಂಡು ಕೊಂಡಿದ್ದು ಅಲ್ಲದೆ ಅವರ ಜೀವಿತಾವಧಿಯಲ್ಲಿನ ಅಪಾರ ಅನುಭವಗಳು ತಲ್ಲಣಗಳು, ತಂಟೆಗಾರರ ರ‍್ಲೆಗಳು, ಮುಗ್ಧರ ಭಾವನೆಗಳು, ಸಜ್ಜನರ ಸಂಪರ್ಕದ ಸ್ಫೂರ್ತಿಯ ಸೆಲೆಗಳು, ವ್ಯಷ್ಟಿ ಮತ್ತು ಸಮಷ್ಟಿಯ ನೆಲೆಯಲ್ಲಿ ನಿರೂಪಿತವಾಗಿವೆ. ನಾಗರಾಜ್ ಅವರು ತಮ್ಮ ವೈಯಕ್ತಿಕ ಬದುಕನ್ನು ಪ್ರಯೋಗಶಾಲೆಯಾಗಿಸಿಕೊಂಡು, ಅಲ್ಲಿ ಕಂಡುಕೊAಡ ಹತ್ತು ಹಲವು ಸಂಗತಿಗಳನ್ನು ಅಭಿವ್ಯಕ್ತಿಸಿರುವ ಇವರ ಈ ಎರಡು ಆತ್ಮಕಥನಗಳು ಹೋರಾಟಗಾರನೊಬ್ಬರ ಸತ್ಯ, ನಿಷ್ಠೆ, ಪ್ರಾಮಾಣಿಕತೆ, ಸೇವಾಬದ್ಧತೆಗೆ ಹಿಡಿದ ಕನ್ನಡಿಯಂತಿವೆ. ಪ್ರಗತಿಯ ಹಿಂದೆ ಪ್ರೇರಣೆಗಳಿರಬೇಕು. ಇಲ್ಲವಾದಲ್ಲಿ ಅಧೋಗತಿ ಕಟ್ಟಿಟ್ಟ ಬುತ್ತಿ, ದಲಿತ ಸಮುದಾಯದ ಪ್ರಗತಿಗೆ ಪ್ರೇರಕಶಕ್ತಿ ಅಂಬೇಡ್ಕರ್‌ರವರು. ಆ ಶಕ್ತಿಯ ಅಂತರAಗವನ್ನು ಸರಿಯಾಗಿ ಅರ್ಥೈಸಿಕೊಂಡಾಗ ದಲಿತ-ಬಲಿತರೆಲ್ಲರೂ ಸಾಮರಸ್ಯ ಸೌಹಾರ್ದತೆಯಿಂದ ಬಾಳಲು ಸಾಧ್ಯವಾಗುತ್ತದೆ. ಬಲಿತವರು ದಲಿತರನ್ನು ಹೃದಯವಂತಿಕೆಯಿAದ ಕಂಡಾಗ ಸಮಾಜದಲ್ಲಿ ಜಗಳ, ದೊಂಬಿ, ಹೊಡೆದಾಟ ಬಡಿದಾಟಗಳು ಇರುವುದಿಲ್ಲ. ಶಾಂತ ಸಮಾಜ ನಿರ್ಮಾಣವಾಗಲು ಈ ತೆರನಾದ ಆತ್ಮಕಥನಗಳು ಬಲಿತವರ ಹೃನ್ಮನ ಪರಿವರ್ತನೆಗೆ, ದಲಿತರ ಜಾಗೃತಿಗೆ ಪ್ರೇರಕವಾಗುವುದರಲ್ಲಿ ಸಂಶಯವಿಲ್ಲ.


ಬಹು ಜನರ ಅನ್ನವನ್ನು ಕದ್ದವನೇ ಶ್ರೀಮಂತ. ಅಂತಹ ಶ್ರೀಮಂತರ ಅಟ್ಟಹಾಸಗಳು ಬಡವರನ್ನು ಬಗ್ಗುಬಡಿಯುವ ತಂತ್ರಗಳು, ಜಾತಿ ಹೆಸರಲ್ಲಿ ಮೆರೆಯುವ ದಿಟ್ಟರನ್ನು ಒಂದಿಷ್ಟಾದರೂ ತಗ್ಗಿಸುವ ಅವರ ಆ ವರಸೆಗಳಿಗೆ ಎದುರಾಗಿ ನಿಲ್ಲಬೇಕಾದ ಪಟ್ಟುಗಳನ್ನು ಕಲಿಸಿಕೊಡುವ ವ್ಯಾಯಾಮ ಶಾಲೆಯಂತಿದೆ ಮುಳ್ಳೂರು ಅವರ ಆತ್ಮಕಥನಗಳು. ಅಲ್ಲಲ್ಲಿ ಹಾಸ್ಯ, ಶೃಂಗಾರ, ಭಯಾನಕ, ಶೋಕ ಭಾವನೆಗಳು ಉತ್ಪನ್ನಗೊಳ್ಳುವಂತೆ, ಓದುಗನಿಗೆ ಒಂದೇ ಬಾರಿಗೆ ಅರ್ಥವಾಗುವಂತೆ ಸರಳ ವಾಕ್ಯಗಳಲ್ಲಿ ನಿರೂಪಿಸಿರುವುದು ಈ ಆತ್ಮಕಥನಗಳ ವೈಶಿಷ್ಟö್ಯತೆಗೆ ಬೆನ್ನೆಲುಬಾಗಿವೆ. ಸಾಧನೆಯ ಹಾದಿಯಲ್ಲಿ ಸಾಗಿದವರು ಅನುಭವಿಸಿದ ನೋವು-ನಲಿವುಗಳ ಪ್ರಾಮಾಣಿಕ ಅಭಿವ್ಯಕ್ತಿಯಾದ ಈ ಆತ್ಮಕಥನಗಳು ಸಾಧಕನ ಅಂತರAಗ ಮತ್ತು ಬಹಿರಂಗ ಕ್ರಿಯೆಗಳನ್ನು ದಾಖಲಿಸಿ, ಸಾಧನಾಶೀಲರಿಗೆ ಪ್ರೇರಕಶಕ್ತಿಯಾಗಿದೆ. ಜೀವನ ಅನುಭವದ ಕಥನವಾದ ಇವುಗಳÀಲ್ಲಿ ಜೀವನದರ್ಶನ, ಮಾನವೀಯತೆ, ಕಾರ್ಯದಕ್ಷತೆ, ಸಮಯನಿಷ್ಠೆ, ಸಾಂಸ್ಕೃತಿಕ ಪರಂಪರೆಯ ಪರಿಚಯ, ಕೌಟಂಬಿಕ ಚಿತ್ರಣ, ಸಾಧಕನ ಸಾಮೀಪ್ಯ ಬಂದ ವ್ಯಕ್ತಿಗಳು ಇಲ್ಲವೇ ಸಾಧಕನೆ ಹುಡುಕಿಕೊಂಡು ಹೋದ ವ್ಯಕ್ತಿಗಳ ಸಂಕ್ಷಿಪ್ತವಾದ ಜೀವಚಿತ್ರಣಗಳು, ಹತ್ತು ಹಲವು ಘಟನೆಗಳು, ಮಾಹಿತಿ ಎಂಬ ಮಹಾನ್ ಸಂಪತ್ತು, ಸಾಧಕನ ಕಲೆಯ ಕೌಶಲ್ಯ ಮೊದಲಾದವುಗಳು ಈರುಳ್ಳಿಯ ಪೊರೆ ಬಿಚ್ಚಿಕೊಳ್ಳುವಂತೆ ಬಿಚ್ಚಿಕೊಳ್ಳತ್ತಾ ಹೋಗುತ್ತದೆ. ಅದರ ಗಟ್ಟಿಯ ಮೂಲವನ್ನು ಪರಿಚಯಿಸುವಂತೆ ಮುಳ್ಳೂರು ಅವರ ಜೀವನ ಮತ್ತು ಸಾಧನೆಗಳು ಅಕ್ಷರವೆಂಬ ಉಸಿರಲ್ಲಿ ಜೀವಂತವಾಗಿವೆ.

Related Posts

See All
Research post Covid-19 lockdown

Prof Rachel Bari, Department of Post Graduate Studies and Research in English, Kuvempu Universitiy, Jnanasahyadri, Shankaraghatta -...

 
 
 

コメント


bottom of page